ನಮ್ಮ ಮನೆಗೆ ಮೊದಲ ಬಾರಿ ಬಂದಾಗ "ವಿಕ್ರಂ ಭಾರದ್ವಾಜ್"
ಮನೆಗೆ ಬಂದ ಅಕ್ಕನ ಮಗ ಜಯಂತನೊಂದಿಗೆ
ಅರಸೀಕೆರೆಯ ವಸತಿಗೃಹವೊಂದರಲ್ಲಿ ರಾತ್ರಿ ತಂಗಿದ್ದಾಗ. ಎಲ್ಲಿ ಮಲಗ್ತಿಯೋ ವಿಕ್ಕಿ ಎಂದು ಕೇಳಿದಾಗ ಸೀದಾ ಹೋಗಿ ಮಲಗಿದ್ದು ಇಲ್ಲಿ. ವಸತಿ ಗೃಹದವ ಮೊದಲು ಸಾಕುಪ್ರಾಣಿಗಳಿಗೆ ಅನುಮತಿಯಿಲ್ಲ ಎಂದಿದ್ದ. ನನ್ನ ಮಾತು ಕೇಳುತ್ತಿದ್ದ ಇವನನ್ನು ನೋಡಿ, ತುಂಬಾ ಒಳ್ಳೆದು ಸಾರ್ ನಿಮ್ ನಾಯಿ ಮಲಗ್ಸಿ ಆದ್ರೆ ಹಾಸಿಗೆ ಮೇಲೆ ಬೇಡ ಎಂದಿದ್ದ
ಗೇಟ್ ಕಾಣುವಂತೆ ಮನೆಯೊಳಗೇ ಮಲಗುತ್ತಿದ್ದ ಅವನ ಪ್ರೀತಿಯ ಸ್ಥಳ
ಅಮಿತನ ಟ್ರೈಸಿಕಲ್ ಮೇಲೆ ಕುಳಿತಾಗ, ಇಂತಹ ತರಲೆಗಳಿಂದಲೆ ನಮ್ಮ ಮನ ಗೆದ್ದವ
ಮುದ್ದು ಮುದ್ದಾಗಿ ನೋಡುಗರನ್ನು ಆಕರ್ಷಿಸುತ್ತಿದ್ದ ತರಲೆ ಸುಬ್ಬ
ಅಮಿತ್ ಭಾರದ್ವಾಜನೊಂದಿಗೆ
ಸ್ನಾನ ಮಾಡಿದ ನಂತರ ದಿವಾನಾ ಮೇಲೆ ಮಲಗಬೇಕು ವಿಕ್ಕಿ ಮತ್ತು ಗುಂಡ ( ೪ ವರ್ಷದ ಹಿಂದೆ ಮನೆ ಬಿಟ್ಟು ಓಡಿ ಹೋದ)
ನನ್ನೊಡನೆ ಆಟವಾಡಲು ಆಹ್ವಾನಿಸುತ್ತಿದ್ದ ಭಂಗಿ
ಬೈಕ್ ಪ್ರಯಾಣ ಅಚ್ಚುಮೆಚ್ಚು
ಕೋಪ ಬಂದಾಗ ದಿವಾನ ಕೆಳಗೆ ಅವಿತುಕೊಳ್ಳುತ್ತಿದ್ದ ಪರಿ
ಮನೆಯೊಳಗೆ ಬಂದ ಹಾರಾಡುವ ಹುಳುಗಳನ್ನು ಹುಡುಕಿ ಓಡಿಸುವಾಗ
ನನ್ನೊಡನೆ ಜಗಳವಾಡುವಾಗಿನ ಭಂಗಿ
ನಂದಿ ಬೆಟ್ಟದಲ್ಲಿ ನಮ್ಮ ಕುಟುಂಬದೊಡನೆ
ನಂದಿ ಬೆಟ್ಟದಲ್ಲಿ ನಮ್ಮಕ್ಕ ಭಾವನ ಜೊತೆ
ಕಾಲು ಚಾಚಿ ಮಲಗುವುದು ತುಂಬಾ ಇಷ್ಟ
ಹೆದರಿಸುವುದಕ್ಕೆಂದು ಇಟ್ಟಿದ್ದ ಕೋಲನ್ನೆ ಕಿತ್ತಿಟ್ಟುಕೊಂಡ ಭೂಪ, ನನ್ನ ಪಾಪ
ನಿತ್ಯ ಕಾಯಕದಲ್ಲಿ ನಿರತ
ಮನೆ ಮೇಲೆ ನಿಂತು ಬೊಗಳುವುದು ಅವನ ಅತ್ಯಂತ ಪ್ರೀತಿಯ ಕೆಲಸ
೭ ಬಾರಿ ಕಳ್ಳನನ್ನು ಒಳಗೆ ಬಿಡದೇ ಮನೆ ಕಾಯ್ದಿದ್ದ
ಅದು ನಾಯಿಯಲ್ಲ ನಮ್ಮೆಲ್ಲರ ಆತ್ಮೀಯ ಮನೆಯ ಸದಸ್ಯನಾಗಿದ್ದ. ನನ್ನ ಮಗನಿಗೆ ಅಣ್ಣನೇ ಆಗಿದ್ದ
ನಮ್ಮಮ್ಮನ ಪ್ರೀತಿಯ ಮೊಮ್ಮಗ
ಜಿ ಕೆ ವಿ ಕೆ ಯಲ್ಲಿ ವಿಹರಿಸುವಾಗ
ಅವನ ಅತ್ಯಂತ ಪ್ರೀತಿಯ ಜಾಗ
ನಮ್ಮನ್ನಗಲಿದ ನಮ್ಮ ಅತ್ಯಂತ ಆತ್ಮೀಯ ಸ್ನೇಹಿತ ವಿಕ್ಕಿ. ಮತ್ತೆ ಬಾ ಪುಟ್ಟ
ನನ್ನ ಜೀವವಿರುವವರೆಗೆ ನಿನ್ನ ನೆನಪು ನನ್ನಲ್ಲಿ ಅಮರ. ಹೋದೆಯ ಗೆಳೆಯ, ಮತ್ತೆ ಹುಟ್ಟಿ ಬಾ ಮುಂದೊಂದು ದಿನ ನನ್ನ ಬಾಳಿನಲ್ಲಿ
7 comments:
ದುಖದ ವಿಚಾರ!!!
ಹೌದು ಸುಬ್ರಮಣ್ಯ, ಸರಿ ಸುಮಾರು ೧೪ ವರ್ಷದ ಆತ್ಮೀಯನ ಅಗಲಿಕೆಯ ನೋವಿನಿಂದ ಹೊರಬರುವುದೇ ಕಷ್ಟವಾಗುತ್ತಿದೆ. ಬರಲು ಕೂಡ ಯಾಕೋ ಇಷ್ಟವಾಗುತ್ತಿಲ್ಲ.
ಬಹಳ ಬೇಜಾರಾಗತ್ತೆ... ಪ್ರಾಣಿಗಳು ಕೊಡುವ ನಿಷ್ಕಲ್ಮಶ ಪ್ರೀತಿ ಬೇರೆಲ್ಲೂ ಸಿಗೋಲ್ಲ. :(
ನೋಡಿ ದುಃಖವಾಯಿತು. ನಾವೂ ಕೂಡ ಬೆಕ್ಕುಗಳನ್ನು ಸಾಕುತ್ತಿದ್ದೆವು. ಅವು ತಾವಾಗಿಯೇ ಮನೆಗೆ ಬಂದು ಸೇರುತ್ತಿದ್ದವು. ಕೆಲವು ತಾವಾಗಿಯೇ ಕಾಣೆಯಾಗುತ್ತಿದ್ದವು. ಕೆಲವು ಖಾಯಿಲೆಯಿಂದ, ಇನ್ನು ಕೆಲವು ನಾಯಿಗಳು ತಿಂದು, ಇಲ್ಲ ಅಪಘಾತದಲ್ಲಿ ಸಾಯುತ್ತಿದ್ದವು. ಏನೇ ಇರಲಿ, ಮುದ್ದಿನಿಂದ ಸಾಕಿದ ಪ್ರಾಣಿ ಕಳೆದುಕೊಂಡರೆ ಎಂತಹ ಸಂಕಟವಾಗುತ್ತದೆ ಎಂದು ಅನುಭವವಿದೆ. ವಿಕ್ಕಿ ಮತ್ತೊಮ್ಮೆ ನಿಮ್ಮ ಮನೆಗೆ ಬರಲಿ
ನೋಡಿ/ಕೇಳಿ ದುಃಖವಾಯಿತು... ಹಾಗೆಯೇ ನನ್ನ ದೊಡ್ಡಮ್ಮನ ಮಗನ ನೆನಪಾಯಿತು... ಅವನ ಅಚ್ಚು ಮೆಚ್ಚಿನ ರೂಬಿ ಅಗಲಿದಾಗ, ಮೂರು ದಿನ ಊಟ ಮಾಡಿರಲಿಲ್ಲ ಅವನು...
ನೋವು ಹಂಚಿಕೊಂಡರೆ ಕಡಿಮೆ ಆಗುತ್ತಂತೆ.
ಸುಬ್ರಹ್ಮಣ್ಯ, ವಿಕಾಸ್, ಸ್ಮಿತಾ ಮತ್ತು ಪ್ರಶಾಂತ್ ಧನ್ಯವಾದಗಳು.
ನನಗೂ ಅನುಭವಿಸಿ ಗೊತ್ತು. ನಮ್ಮನೆಯಲ್ಲೂ ಎಲ್ಲರಿಗೂ ನಾಯಿ, ಬೆಕ್ಕುಗಳೆಂದರೆ ಅಚ್ಚುಮೆಚ್ಚು. ಅವುಗಳ ಅಗಲಿಕೆಯ ದುಖಃ ಮಾತ್ರ ನೀವು ಹೇಳಿದಂತೆಯೇ ನಿರಂತರ. ಆದರೆ ನಾಯಿ, ಬೆಕ್ಕುಗಳಿಲ್ಲದೆಯೇ ನನ್ನ ಬಾಳಿಗಂತೂ ಅರ್ಥವೇ ಇಲ್ಲ :'(
ನಿಮ್ಮ ವಿಕ್ಕಿ ನಿಮ್ಮ ಬಾಳಿನಲ್ಲಿ ಪುನಃ ಬರಲಿ.
Post a Comment