ಉಗ್ರರನ್ನು ಬೆಳೆಸಿದ್ದೇ ನಾವು: ಮೊದಲ ಬಾರಿಗೆ ಪಾಕ್ ಒಪ್ಪಿಗೆ
೦೯/೦೭/೨೦೦೯ ರಂದು ಎಲ್ಲ ಪತ್ರಿಕೆಗಳಲ್ಲೂ ಮುಖ ಪುಟದಲ್ಲಿರಬೇಕಾದ ಸುದ್ದಿಯೊಂದು ಕೊನೆಯ ಪುಟಗಳಿಗೆ ಹೋಗಿರುವುದು ವಿಷಾದನೀಯ. ಇರಲಿಬಿಡಿ ನನ್ನಂತಹವರಿಗೆ ಇಂತಹ ಸುದ್ದಿಗಳೆ ಗಮನ ಸೆಳೆಯುವುದು. ಭಯೋತ್ಪಾದನೆಯನ್ನು ಅಲ್ಪಾವಧಿ ಗುರಿಸಾಧನೆಗಾಗಿ ನಾವೇ ರಾಷ್ಟ್ರೀಯ ನೀತಿಯಂತೆ ಬೆಳೆಸಿದ್ದೇವೆ ಎಂದು ಆ ದೇಶದ ಅಧ್ಯಕ್ಷನೇ ಹೇಳಿರುವುದು ಗಮನಾರ್ಹ ಮತ್ತು ಅದರಲ್ಲಿ ಆಶ್ಚರ್ಯ ಪಡುವಂತದ್ದೇನು ಇಲ್ಲ. ಇಡಿ ಜಗತ್ತಿಗೆ ಗೊತ್ತಿದ್ದ ಸತ್ಯ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.
ಆದರೆ ಕನ್ನಡಿ ಬೇಕಾಗಿರುವುದು ನಮ್ಮಲ್ಲಿನ ಡೋಂಗಿ ಬುದ್ದಿಜೀವಿಗಳಿಗೆ.
ಬುದ್ದಿಜೀವಿಗಳೆ ಈಗೇನು ಹೇಳುತ್ತೀರಿ?
ಏನಪ್ಪ ಇವನು ದೇಶದ ಹಿತಚಿಂತಕರನ್ನೆ ಪ್ರಶ್ನಿಸುತ್ತಿದ್ದಾನಲ್ಲ ಎಂದು ಗಾಬರಿಯಾಗಬೇಡಿ. ಅದಕ್ಕೂ ಕಾರಣವಿದೆ. ಹಿಂದೊಮ್ಮೆ ಸಂಪದ ದಲ್ಲಿ ನಡೆದ ಒಂದು ಸುಧೀರ್ಘ ಚರ್ಚೆಯಲ್ಲಿ ಸ್ವಘೋಷಿತ ಬುದ್ದಿಜೀವಿಯೊಬ್ಬರು (ಇವರ ಹಿಂದೂಗಳ ವಿರುದ್ದ ದ್ವೇಷಪೂರಿತ ಲೇಖನಗಳು ತಲೆಕೆಟ್ಟಾಗೊಮ್ಮೆ ಪ್ರಕಟವಾಗುವ ಪತ್ರಿಕೆ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾಗುತ್ತವೆಯೆಂದು ಇವರ ಹೆಮ್ಮೆ) ತಮ್ಮ ಲೇಖನದಲ್ಲಿ ಹೀಗೆ ಉಧ್ದರಿಸಿದ್ದರು.
"ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು" (ಇದರ ಪ್ರತಿಯನ್ನು ಲಗತ್ತಿಸಿದ್ದೇನೆ. ಸಂಪದದ ಕೊಂಡಿಯನ್ನು ಕೊಡಬಹುದಿತ್ತು ಆದರೆ ಪ್ರತಿಯೇ ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ)
ಇದಕ್ಕೆ ನನ್ನ ಉತ್ತರ ಹೀಗಿತ್ತು
"ಹೌದು ಹೇಳಿ ನಿಮ್ಮಂತ ಸಮಾಜವಾದಿಗಳಿಗೆ ಪಾಕಿಸ್ಥಾನದ ಅಧ್ಯಕ್ಷನೆ ಸ್ವತಃ ಅದನ್ನು ಧೃಡಪಡಿಸಿದರೂ ನಂಬಿಕೆ ಬರುವುದಿಲ್ಲ ಬಿಡಿ. ಇಷ್ಟಕ್ಕೂ ನಿಮ್ಮನ್ನು ನಂಬಿ ಎಂದು ಯಾರು ಅಂಗಲಾಚಿದ್ದಾರೆ? ನೀವು ನಂಬಿದರೆಷ್ಟು ಬಿಟ್ಟರೆಷ್ಟು, ಇಡೀ ಜಗತ್ತಿಗೆ ಗೊತ್ತಿದೆ ಸತ್ಯ."
ಇದಕ್ಕೆ ಈ ಮಹನೀಯ ಲೇಖಕರ ಉತ್ತರ
"ಪಾಕಿಸ್ಥಾನ ಹಲವು ನೆಲೆಗಳಲ್ಲಿ ಒಡೆದು ಹೋಗಿರುವ ದೇಶ. ಅಲ್ಲಿ ನಿಜವಾಗಿ ಒಂದು ಪ್ರಾತಿನಿಧಿಕ ಪ್ರಭುತ್ವವೆಂಬುದಿಲ್ಲ. ಅಲ್ಲೀಗ ಬಹು ವರ್ಷಗಳ ನಂತರ ಪ್ರಜಾಪ್ರಭುತ್ವದ ಸರ್ಕಾರ ಬಂದಿದೆ. ಆದರೆ ಅದಿನ್ನೂ ರಾಷ್ಟ್ರದ ಮೇಲೆ ಸಂಪೂರ್ಣ ಹತೋಟಿ ಸಾಧಿಸಿಲ್ಲ. ಹಾಗಾಗಿ ಸರ್ಕಾರದ ಅರಿವಿಲ್ಲದೇ ಅಲ್ಲಿ ಮತಾಂಧ ಷಕ್ತಿಗಳಿಂದ ಅನೇಕ ದುಷ್ಟ ಚಟುವಟಿಕೆಗೆಗಳು ನಡೆದಿರುವ ಸಾಧ್ಯತೆ ಇದೆ."
ಇದನ್ನೆಲ್ಲ ಏಕೆ ವಿಷದಪಡಿಸುತ್ತಿದ್ದೇನೆಂದರೆ, ಈ ಎಲ್ಲ ಸಾಲುಗಳು ಅರಿವಿಲ್ಲದೆ ಬಂದವಲ್ಲ. ಆದರೆ ಮುಂದಾಲೋಚನೆಯಿಲ್ಲದೆ ವಿರೋಧಿಸುವುದೆ ಪರಮ ಧ್ಯೇಯವೆಂದು ಪರಿಗಣಿಸಿದ್ದರಿಂದಾದ ಅನಾಹುತ.
ಆದರೆ ನನ್ನ ಆ ಮಾತು ಸರಿಯಾಗಿ ೭ ತಿಂಗಳಿಗೆ ಸಾಕ್ಷಿ ಸಮೇತ ನಿಜವಾಗುತ್ತದೆಯೆಂದು ನಾನು ಖಂಡಿತ ಭಾವಿಸಿರಲಿಲ್ಲ.
ಈ ಬುದ್ದಿಜೀವಿಗಳಿಗೇನಾಗಿದೆ? ನನ್ನಂತಹ ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುವ ಸತ್ಯ ಮತ್ತು ವಾಸ್ತವ ಇವರಿಗೇಕೆ ಅರ್ಥವಾಗುವುದಿಲ್ಲ? ಯಾರನ್ನೋ ಟೀಕಿಸುವ, ತೇಜೋವಧೆ ಮಾಡುವ ಭರದಲ್ಲಿ ಸ್ವದೇಶವನ್ನೆ ಮತ್ತದರ ಹಿತಾಸಕ್ತಿಯನ್ನೆ ಬಲಿಗೊಡಲು ನಿಂತಿದ್ದಾರಲ್ಲ ಇವರೇಕೆ ಹೀಗೆ?
ಸ'ಮಜಾ'ವಾದಿ ಬುದ್ದಿಜೀವಿಗಳೆ ಈಗ ಹೇಳಿ ನೀವು ದೇಶದ್ರೋಹಿಗಳಲ್ಲವೆ? ಅಂದು ಪಾಕಿಸ್ತಾನ ನಿರ್ದೋಷಿ ಎಂದು ಪರಿಪರಿಯಾಗಿ ಅಂಗಲಾಚಿದ ತಾವು ಇಂದು ಪಾಕಿಸ್ತಾನದ ಸ್ವತಃ ಅಧ್ಯಕ್ಷನೆ ನಿಮ್ಮ ಬೆಂಬಲಕ್ಕೆ ನಿಲ್ಲದ ಕಾಲದಲ್ಲಿ ತಮ್ಮ ಸಮರ್ಥನೆಗೆ ಏನನ್ನು ಬಳಸುತ್ತೀರಿ? (ಪಾಕಿಸ್ತಾನದ ಚರಿತ್ರೆಯೆ ಅಂತಹದು ಅದು ಯಾರ ನಂಬಿಕೆಗೂ ಅರ್ಹವಲ್ಲ ಎಂಬುದು ಇಡಿ ವಿಶ್ವಕ್ಕೆ ಗೊತ್ತಿದೆ) ರಾಷ್ಟ್ರೀಯತೆ, ಬಿಜೆಪಿ, ಆರ್ಎಸ್ ಎಸ್ ಮತ್ತು ಹಿಂದೂಗಳನ್ನು ವಿರೋಧಿಸಿ ತಮ್ಮ ತೆವಲು ತೀರಿಸಿಕೊಳ್ಳುವ ಭರದಲ್ಲಿ ಶತ್ರುವಿನ ಶತ್ರು ಮಿತ್ರ ಎನ್ನುವ ಸಮಯೋಚಿತ ಸೂತ್ರಕ್ಕೆ ಶರಣಾಗಿ ಅಂದು ಪಾಕಿಸ್ತಾನವನ್ನು ಸಮರ್ಥಿಸಲು ನಿಂತವರನ್ನು ದೇಶದ್ರೋಹಿಗಳೆನ್ನಲು ಬಹುಷಃ ಇದಕ್ಕಿಂತ ಹೆಚ್ಚಿನ ಸಾಕ್ಷ್ಯದ ಅವಶ್ಯಕತೆಯಿದೆಯೆ?
ಸ್ವತಃ ಪಾಕೀಸ್ತಾನದ ಅಧ್ಯಕ್ಷನೆ ಉಗ್ರರನ್ನು ಬೆಳೆಸಿರುವುದು ನಾವೇ ಎಂದು ಒಪ್ಪಿಕೊಂಡರೂ ನೀವು ಅದನ್ನು ಒಪ್ಪಲಾರಿರಿ ಅಲ್ಲವೆ? ಅಥವಾ ನಾನು ಹೇಳಿದ್ದು ಹಾಗಲ್ಲ ಹೀಗೆ ಎಂದು ತಿಪ್ಪೆ ಸಾರಿಸಲು ಮುಂದಾಗುತ್ತೀರಿ.ಈಗಲೂ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕರಿಗೂ ಸಂಬಂಧವಿಲ್ಲ ನಾನು ಹೇಳಿದ್ದೇ ಬೇರೆ ಅದನ್ನು ತಿರುಚಲಾಗಿದೆ ಎಂಬ ನಿಮ್ಮ ಸಮಯಸಾಧಕತನದ ಮಾತನ್ನು ಇಲ್ಲಿ ಉದ್ಗರಿಸಿ ಮತ್ತೊಮ್ಮೆ ನಗೆಪಾಟಲಿಗೀಡಾಗಬೇಡಿ.
ಬೆಂಕಿಯನ್ನು ಮಡಿಲಲ್ಲಿಟ್ಟುಕೊಂಡು ಸಾಕಿದ ಪಾಕಿಗಳಿಗೆ,ಬಿಸಿ ತಟ್ಟಿ ಅವರೇ ಒಪ್ಪಿಕೊಂಡಿದ್ದಾರೆ, Succes dosen't happen in Isolation ಅನ್ನುವ ಸತ್ಯದ ಅರಿವು ಬಹುಶಃ ಪಾಕಿಗಳಿಗೆ ಅರ್ಥವಾಗಬಹುದಾದರೆ ನಿಮಗೆಂದು ಜ್ಙಾನೋದಯವಾಗುತ್ತದೆ? ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ನಿಮ್ಮಂತ ಬುದ್ದಿವಂತರಿಗೆ ಈ ವರದಿಗಳು ಅರ್ಥವಾಗುವುದಿಲ್ಲವೇ? ಅಥವಾ ಧೃತರಾಷ್ಟ್ರ ಪ್ರೇಮವೆ?
ಬುದ್ದಿಜೀವಿಗಳೆಂದು ಸ್ವಯಂ ಹಣೆಪಟ್ಟಿ (ಕ್ಷಮಿಸಿ, ಹಣೆಪಟ್ಟಿಯಲ್ಲ ಕಣ್ಕಾಪು) ಕಟ್ಟಿಕೊಂಡು ನಂಬಿಕೆಗೆ ಅರ್ಹವಲ್ಲದವರನ್ನು ಸಮರ್ಥಿಸಿ ಓದುಗರ ದಿಕ್ಕು ತಪ್ಪಿಸುವ ಕೆಲಸವನ್ನು ಇನ್ನೂ ಎಷ್ಟು ದಿನ ಮಾಡುತ್ತೀರಿ? ಭಯೋತ್ಪಾದಕರು ಹೊರಗಿನ ಶತ್ರುಗಳಾದರೆ ಅವರನ್ನು ಎದುರಿಸಬಹುದು ಆದರೆ ಇಂತಹ ಅಕ್ಷರ ಭಯೋತ್ಪಾದಕರು ಒಳಗಿನಿಂದಲೆ ಗೆದ್ದಲು ಹಿಡಿಸಿ ದೇಶವನ್ನೆ ಕೃಶವಾಗಿಸುವ ಕ್ಯಾನ್ಸರ್ ಮಾರಿಯಾಗುವ ನೀವುಗಳು ಇದೆಲ್ಲದರ ಬದಲಾಗಿ ಬದಲು ಕಟು ಸತ್ಯವನ್ನೇಕೆ ನುಡಿಯಬಾರದು? ನಿಮ್ಮ ಸುಳ್ಳಿನ ಬುನಾದಿಯನ್ನು ನಂಬಿಕೊಂಡು ಭಾರತವೂ, ಮತಾಂಧತೆಯಿಂದಲೆ ಜನಿಸಿದ ನಿಮ್ಮ ಪ್ರೇಮಿ ರಾಷ್ಟ್ರದಂತೆ ಮತ್ತೊಂದು ವಿಫಲ ರಾಷ್ಟ್ರವಾಗುವುದು ಬೇಡ. ನಿಮಗೆ ಸಮಾಜವನ್ನು ಸುಧಾರಿಸುವ ಕಳಕಳಿಯಿದ್ದರೆ ವಾಸ್ತವ ಮತ್ತು ಸತ್ಯವನ್ನಾಧರಿಸಿದ ಲೇಖನಗಳ ಮೂಲಕ ಅದನ್ನು ಸಾಕಾರಗೊಳಿಸಿ. ಹಿಂದೂ ಮೂಲಭೂತವಾದಿಗಳನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿ ಸಂಘಟನೆಗಳಿಗೆ, ದೇಶದ ಶತ್ರುಗಳಿಗೆ, ದರೋಡೆಗಿಳಿದಿರುವ ನಕ್ಸಲರಿಗೆ, ಜೀವ ತೆಗೆಯುವ ಭಯೋತ್ಪಾದಕರಿಗೆ ನಿಮ್ಮ ಬೆಂಬಲವನ್ನು ಸೀಮಿತಗೊಳಿಸದೆ ನೈಜ ರಾಷ್ಟ್ರಪ್ರೇಮಿಗಳಿಗೆ ಮೀಸಲಿಡಿ ಅವರು ಬಿಜೇಪಿಯವರಾಗಲಿ ಕಾಂಗ್ರೆಸ್ಸಿನವರಾಗಲಿ. ಇಲ್ಲದಿದ್ದರೆ ಹೀಗೆ ನಿರಂತರವಾಗಿ ಓದುಗರ ಮುಂದೆ ನಿಮ್ಮ ಅಸಲು ಬಣ್ಣ ಬಯಲಾಗುತ್ತಾ ಹೋಗುತ್ತದೆ.
ಮತಾಂಧತೆಯನ್ನು ವಿರೋಧಿಸುವ ಬುದ್ದಿಜೀವಿಗಳು ಮತಾಂಧತೆಯಿಂದಲೆ ಜನ್ಮ ತಳೆದ, ಮತಾಂಧತೆಯಿಂದಲೆ ಬದುಕಿರುವ, ಮತಾಂಧತೆಯಿಂದಲೆ ಭಾರತದ ಮೇಲೆ ಆಕ್ರಮಣ ನಡೆಸುವ, ಕೊನೆಗೆ ಅದರಲ್ಲೆ ನಶಿಸಿಹೋಗುವ ದೇಶವೊಂದರ ಬೆಂಬಲಕ್ಕೆ ನಿಲ್ಲುವುದು ಸರ್ವತಾ ಸಮ್ಮತವಲ್ಲ.
ಬುದ್ದಿ ಜೀವಿಗಳೇ, ನಿಮ್ಮಿಂದ ಸಮಾಜ ಮಾರ್ಗದರ್ಶನ ಖಂಡಿತ ಬಯಸುತ್ತದೆ ಆದರೆ ಅದು ದೇಶಕ್ಕೆ ಮಾರಕವಾಗದಿರಲಿ. ಲೇಖಕರಿಗಿರಬೇಕಾದ ಮುಂದಾಲೋಚನೆಯನ್ನು ಮೈಗೂಡಿಸಿಕೊಳ್ಳಿ. ಬಿಜೇಪಿಯನ್ನು ವಿರೋಧಿಸುವ ಒಂದಂಶದ ಕಾರ್ಯಕ್ರಮಕ್ಕೆ ತಕ್ಕಂತೆ ಲೇಖನಗಳನ್ನು ಬರೆದು ದೇಶದ್ರೋಹಿಗಳನ್ನು ಬೆಂಬಲಿಸಿ ತನ್ಮೂಲಕ ದೇಶದ್ರೋಹಿಗಳಾಗಬೇಡಿ ಎಂದು ನನ್ನ ಕಳಕಳಿಯ ಮನವಿ.
ನಿಜಕ್ಕೂ ಸ್ವವಿಮರ್ಶೆಗೆ ತನ್ನನ್ನು ತಾನು ಒಪ್ಪಿಕೊಳ್ಳುವ ಆ ಮೂಲಕ ತನ್ನನ್ನು ತಿದ್ದಿಕೊಳ್ಳುವ ಹಂತಕ್ಕೆ ಆ ದೇಶ ಬಂದು ನಿಂತಿದ್ದರೆ ಭಾರತವೇ ಕುಸಿಯುತ್ತಿರುವ ಆ ದೇಶಕ್ಕೆ ಆಸರೆಯಾಗಿ ನಿಂತು ಮೇಲೆತ್ತಲಿ. ಇಷ್ಟಕ್ಕೂ "ಸರ್ವೆ ಜನ ಸುಖಿನೋ ಭವಂತು" "ವಸುಧೈವ ಕುಟುಂಬಕಂ" "ದಯೆಯೆ ಧರ್ಮದ ಮೂಲ" ಎಂದು ಜಗತ್ತಿಗೆ ಸಾರಿದ್ದೆ ಭಾರತ. "ಕ್ಷಮಾಯಾ ಧರಿತ್ರಿ" ನೀತಿಯನ್ನು ಅಕ್ಷರಸಹ ಪಾಲಿಸಿ ನಮ್ಮ ಶತ್ರು ರಾಷ್ಟ್ರವಾಗಿದ್ದರೂ ಮನಃಪರಿವರ್ತನೆ ನಮಗೆ ಕಾಣಿಸಿದರೆ ನಮ್ಮೊಡನೆ ಕರೆದೊಯ್ಯೊಣ.
ಹಾಂ!!! ಬುದ್ದಿಜೀವಿಗಳು ನಮಗೆ ಅವಕಾಶ ಕೊಟ್ಟರೆ ಮಾತ್ರ!
ಬುದ್ದಿಜೀವಿಗಳೆ ಇನ್ನಾದರೂ ಎಚ್ಚೆತ್ತುಕೊಳ್ಳಿ. ನಂಬಿಕೆಗೆ ಅನರ್ಹವಾದ ದೇಶವೊಂದನ್ನು ಬೆಂಬಲಿಸಿ ಹೀಗೆಯೆ ಆಗೊಮ್ಮೆ ಈಗೊಮ್ಮೆ ಅದರ ಬಟ್ಟೆ ಕಳಚಿ ಬಿದ್ದಾಗ ಎಲ್ಲರೆದುರಿಗೆ ಬೆತ್ತಲಾಗಬೇಡಿ.

5 comments:
ಪ್ರಾಸ್ಕಾರವರೆ
ಸಂಪದಕ್ಕೆ ಬಂದ ನಾನು ನಿಮ್ಮೀ ಲೇಖನ ಓದಿದೆ.
ಏನೇ ಹೇಳಿ ನಮ್ಮ ದೇಶ, ಸಂಸ್ಕೃತಿಯ ಬಗ್ಗ್ಗಿನ ಲೇಖನ ಇತ್ತೀಚೆಗೆ ಅಲ್ಲಿ ನಿಶಿಧ್ದ ವಾಗುತ್ತಿದೆ ಅನ್ನಿಸುತ್ತಿದೆ. ಬಹುಷ:
ಈ ಲೇಖನಗಳ ವಿರೋಧಿಗಳಲೊಬ್ಬರು ಮಾಡರೇಟರ್ ಆಗಿರವುದೇ ಕಾರಣವೆನಿಸುತ್ತದೆ
ಏನಾಗಲಿ
ನೀವು ಎತ್ತಿದ ವಿಷಯ ಸರಿಯಾದುದು . ಚೆನ್ನಾಗಿ ಹೇಳಿದ್ದೀರ.
Prasca,
ಉತ್ತಮವಾದ ಲೇಖನ. ಬುದ್ದಿಜೀವಿಗಳೆಂಬ ಸ್ವಘೋಷಿತ ವ್ಯಕ್ತಿಗಳು ತಾವು ಬರೆದಿದ್ದೆ ಸತ್ಯ, ಆಡಿದ್ದೆ ಮಾತು ಎಂಬಂತೆ ವರ್ತಿಸುತ್ತಿದ್ದಾರೆ, ಅದಕ್ಕೆ ಕೆಲ ಚೇಲಾಗಳ ಕುಮ್ಮಕ್ಕೂ ಇವೆ. ನಿಮ್ಮ ಲೇಖನಗಳು ಚೆನ್ನಾಗಿ ಬರುತ್ತಿರಲಿ,
ರೂಪ ಮತ್ತು ಹರೀಶರವರೆ,
ಎಲ್ಲ ವೇದಿಕೆಗಳಲ್ಲೂ ಇದು ಸಾಮಾನ್ಯ. ಆದರೆ ಅಂತಹವರನ್ನು ವಿರೋಧಿಸಿ ಅವರ ಆಷಾಡಭೂತಿತನವನ್ನು ಆಗಾಗ ಬೆತ್ತಲುಗೊಳಿಸಿದರೆ ಅವರೆ ಸರಿಹೋಗುತ್ತಾರೆ ಹೆಚ್ಚಿನದೇನು ಬೇಡ. ಆದರೆ ನಮಗ್ಯಾಕೆ ಎಂದು ಸುಮ್ಮನಾದರೆ ಅವರು ಹೆಚ್ಚಿಕೊಳ್ಳುತ್ತಾರೆ.
ಬುದ್ಧಿಜೀವಿಗಳು ಈಗಲಾದರೂ ಬದಲಾಗುತ್ತಾರೆಂದು ನೀವಂದುಕೊಂಡಿದ್ದರೆ ನಿಮಗಿಂತ ಹುಚ್ಚರು ಬೇರಾರಿಲ್ಲ. ಈರೀತಿಯ ಪ್ರಸಂಗಗಳು ಹಿಂದೆಯೂ ಬಂದಿವಿ. ಆ ಜೀವಿಗಳು ಮಾತ್ರ ತಮ್ಮ ಅದೇ ಸಿಕ್ಯುಲರ್ ಕೂಪದಿಂದ ಹೊರಬಂದಿಲ್ಲ. ನಿಮ್ಮಂತವರು ಈ ಬಗ್ಗೆ ಬರೆಯುತ್ತಿರುವುದೇ ಒಂದು ಸಂತೋಷ.
ಹುಚ್ಚರನ್ನು ಹುಚ್ಚರೆ ವಿಚಾರಿಸಿಕೊಳ್ಳಬೇಕಲ್ಲವೆ?
ನಿಮ್ಮ ನೇರಮಾತು ನನ್ಗಿಷ್ಟವಾಯ್ತು. ಧನ್ಯವಾದಗಳು
Post a Comment