Tuesday, June 21, 2011

ಪುತ್ರ ಶೋಕಂ ನಿರಂತರಂ. ವಿಕ್ಕಿಯ ಅಗಲಿಕೆಯ ನೋವು

ನಮ್ಮ ಮನೆಗೆ ಮೊದಲ ಬಾರಿ ಬಂದಾಗ "ವಿಕ್ರಂ ಭಾರದ್ವಾಜ್"


ಮನೆಗೆ ಬಂದ ಅಕ್ಕನ ಮಗ ಜಯಂತನೊಂದಿಗೆ



ಅರಸೀಕೆರೆಯ ವಸತಿಗೃಹವೊಂದರಲ್ಲಿ ರಾತ್ರಿ ತಂಗಿದ್ದಾಗ. ಎಲ್ಲಿ ಮಲಗ್ತಿಯೋ ವಿಕ್ಕಿ ಎಂದು ಕೇಳಿದಾಗ ಸೀದಾ ಹೋಗಿ ಮಲಗಿದ್ದು ಇಲ್ಲಿ. ವಸತಿ ಗೃಹದವ ಮೊದಲು ಸಾಕುಪ್ರಾಣಿಗಳಿಗೆ ಅನುಮತಿಯಿಲ್ಲ ಎಂದಿದ್ದ. ನನ್ನ ಮಾತು ಕೇಳುತ್ತಿದ್ದ ಇವನನ್ನು ನೋಡಿ, ತುಂಬಾ ಒಳ್ಳೆದು ಸಾರ್ ನಿಮ್ ನಾಯಿ ಮಲಗ್ಸಿ ಆದ್ರೆ ಹಾಸಿಗೆ ಮೇಲೆ ಬೇಡ ಎಂದಿದ್ದ


ಗೇಟ್ ಕಾಣುವಂತೆ ಮನೆಯೊಳಗೇ ಮಲಗುತ್ತಿದ್ದ ಅವನ ಪ್ರೀತಿಯ ಸ್ಥಳ


ಅಮಿತನ ಟ್ರೈಸಿಕಲ್ ಮೇಲೆ ಕುಳಿತಾಗ, ಇಂತಹ ತರಲೆಗಳಿಂದಲೆ ನಮ್ಮ ಮನ ಗೆದ್ದವ


ಮುದ್ದು ಮುದ್ದಾಗಿ ನೋಡುಗರನ್ನು ಆಕರ್ಷಿಸುತ್ತಿದ್ದ ತರಲೆ ಸುಬ್ಬ


ಅಮಿತ್ ಭಾರದ್ವಾಜನೊಂದಿಗೆ


ಸ್ನಾನ ಮಾಡಿದ ನಂತರ ದಿವಾನಾ ಮೇಲೆ ಮಲಗಬೇಕು ವಿಕ್ಕಿ ಮತ್ತು ಗುಂಡ ( ೪ ವರ್ಷದ ಹಿಂದೆ ಮನೆ ಬಿಟ್ಟು ಓಡಿ ಹೋದ)



ನನ್ನೊಡನೆ ಆಟವಾಡಲು ಆಹ್ವಾನಿಸುತ್ತಿದ್ದ ಭಂಗಿ


ಬೈಕ್ ಪ್ರಯಾಣ ಅಚ್ಚುಮೆಚ್ಚು


ಕೋಪ ಬಂದಾಗ ದಿವಾನ ಕೆಳಗೆ ಅವಿತುಕೊಳ್ಳುತ್ತಿದ್ದ ಪರಿ


ಮನೆಯೊಳಗೆ ಬಂದ ಹಾರಾಡುವ ಹುಳುಗಳನ್ನು ಹುಡುಕಿ ಓಡಿಸುವಾಗ


ನನ್ನೊಡನೆ ಜಗಳವಾಡುವಾಗಿನ ಭಂಗಿ


ನಂದಿ ಬೆಟ್ಟದಲ್ಲಿ ನಮ್ಮ ಕುಟುಂಬದೊಡನೆ



ನಂದಿ ಬೆಟ್ಟದಲ್ಲಿ ನಮ್ಮಕ್ಕ ಭಾವನ ಜೊತೆ



ಕಾಲು ಚಾಚಿ ಮಲಗುವುದು ತುಂಬಾ ಇಷ್ಟ



ಹೆದರಿಸುವುದಕ್ಕೆಂದು ಇಟ್ಟಿದ್ದ ಕೋಲನ್ನೆ ಕಿತ್ತಿಟ್ಟುಕೊಂಡ ಭೂಪ, ನನ್ನ ಪಾಪ





ನಿತ್ಯ ಕಾಯಕದಲ್ಲಿ ನಿರತ


ಮನೆ ಮೇಲೆ ನಿಂತು ಬೊಗಳುವುದು ಅವನ ಅತ್ಯಂತ ಪ್ರೀತಿಯ ಕೆಲಸ


೭ ಬಾರಿ ಕಳ್ಳನನ್ನು ಒಳಗೆ ಬಿಡದೇ ಮನೆ ಕಾಯ್ದಿದ್ದ


ಅದು ನಾಯಿಯಲ್ಲ ನಮ್ಮೆಲ್ಲರ ಆತ್ಮೀಯ ಮನೆಯ ಸದಸ್ಯನಾಗಿದ್ದ. ನನ್ನ ಮಗನಿಗೆ ಅಣ್ಣನೇ ಆಗಿದ್ದ

ನಮ್ಮಮ್ಮನ ಪ್ರೀತಿಯ ಮೊಮ್ಮಗ


ಜಿ ಕೆ ವಿ ಕೆ ಯಲ್ಲಿ ವಿಹರಿಸುವಾಗ

ಅವನ ಅತ್ಯಂತ ಪ್ರೀತಿಯ ಜಾಗ

ನಮ್ಮನ್ನಗಲಿದ ನಮ್ಮ ಅತ್ಯಂತ ಆತ್ಮೀಯ ಸ್ನೇಹಿತ ವಿಕ್ಕಿ. ಮತ್ತೆ ಬಾ ಪುಟ್ಟ


ನನ್ನ ಜೀವವಿರುವವರೆಗೆ ನಿನ್ನ ನೆನಪು ನನ್ನಲ್ಲಿ ಅಮರ. ಹೋದೆಯ ಗೆಳೆಯ, ಮತ್ತೆ ಹುಟ್ಟಿ ಬಾ ಮುಂದೊಂದು ದಿನ ನನ್ನ ಬಾಳಿನಲ್ಲಿ

Sunday, June 19, 2011

ಜನಸ್ತಾನದ ಬಳಿಯೇ ಇರುವ, ಆದರು ಹೆಚ್ಚು ಪ್ರಚಾರವಿಲ್ಲದ ಜಲಪಾತ

ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನನ್ನ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆಗೆಯಲು ಬಿಟ್ಟಿರಲಿಲ್ಲ. ಈ ಬಾರಿ ಅದೇನೇ ಆದರೂ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆ. ಸಮೀಪದ ದೇವಸ್ತಾನನಗರಿಗೆ ಶನಿವಾರ ಜನಸ್ತೋಮವೇ ನೆರೆಯುವುದರಿಂದ ವಸತಿ ಸಿಗುವುದು ಕಷ್ಟ. ಅಲ್ಲಿನ ಹತ್ತಿರದ ಊರಿನ ರವಿಕುಮಾರ್ ಅವರ ತಂಗಿಯ ಗಂಡ ಕೃಷ್ಣರಾಜ ನನ್ನ ಸಹೋದ್ಯೋಗಿ. ಅವನ ಮೂಲಕ ಹೋಂ ಸ್ಟೇ ಒಂದನ್ನು ಕಾದಿರಿಸಿದೆ. ಶನಿವಾರ ೧ ಗಂಟೆಗೆ ಮನೆಬಿಟ್ಟಾಗಲೇ ನಾನು ಹೊರಡುತ್ತಿದ್ದೇನೆಂದು ಅರಿವಾದದ್ದು. ೨ ಗಂಟೆಯಾದರೂ ಗೊರಗುಂಟೆ ಪಾಳ್ಯದಿಂದ ಹೊರಹೋಗಲು ಬೆಂಗಳೂರಿನ ವಾಹನದಟ್ಟಣೆಯಿಂದ ಸಾಧ್ಯವಾಗಲಿಲ್ಲ. ೭ ಗಂಟೆಗೆ ಗಮ್ಯ ತಲುಪಿದೆವು. ಬೆಳಿಗ್ಗೆ ೮ ಗಂಟೆಗೆ ಜಲಪಾತದೆಡೆ ಪಯಣ. ದೇವಸ್ತಾನ ನಗರಿಯಲ್ಲಿ ಯಾರಿಗೂ ಈ ಜಲಪಾತದ ಬಗ್ಗೆ ಅರಿವಿರಲಿಲ್ಲ. ಪತ್ರಿಕೆಯ ಮಾಹಿತಿಯನ್ನೆ ಆಧರಿಸಿ ಆ ಶಾಲೆಯ ಬಳಿ ಎಡಕ್ಕೆ ತಿರುಗಿದಾಗ ಕಂಡು ಬಂದ ಹಳ್ಳದ ಸೇತುವೆಯ ಬಳಿ ಕಂಡ ಜೀಪ್ ಚಾಲಕ ಇಲ್ಲಿ ಎಂತದೂ ಅರ್ಬಿ ಇಲ್ವಲ್ಲ ಎಂದಾಗ ನಿರಾಶೆ. ಮತ್ತೆ ಸಿಕ್ಕ ಇನ್ನಿಬ್ಬರು ಹೌದಲ್ಲ!! ಹೀಗೆ ಹೋಗಿ ಎಂದು ಮಾರ್ಗದರ್ಶನ ನೀಡಿದಾಗ ನೆಮ್ಮದಿ. ಆ ಮನೆ ತಲುಪಿ ಅವರ ಸಹಾಯದಿಂದ ತೋಟವನ್ನು ಹಾಯ್ದು ನಿಂತದ್ದು ಈ ಜಲಪಾತ ಬಳಿ. ಇಷ್ಟು ಸುಲಭದ ದಾರಿಯ ಕ್ರಮಿಸಿ ಇಂತಹ ಸುಂದರ ಜಲಪಾತ ತಲುಪಿದ್ದು ಖುಷಿಯಾಗಿದ್ದೇ ಎಲ್ಲರಿಗೂ ನಿರಿಗಿಳಿದೇ ಬಿಟ್ಟರು. ಆದರೂ ನಮ್ಮ ನಿರೀಕ್ಷೆಯಂತೆ ಮಳೆಯೂ ಇರಲಿಲ್ಲ, ಹೆಚ್ಚು ನಡಿಗೆಯಂತೂ ಇಲ್ಲವೇ ಇಲ್ಲ, ಆದರೂ ಸುಂದರ ತಾಣವೊಂದನ್ನು ಸಂದರ್ಶಿಸಿ ಬೆಂಗಳೂರು ತಲುಪಿದಾಗ ಸಂಜೆ ೫ ಗಂಟೆ.

ಅರವಿಂದರ ಬ್ಲಾಗ್ ನೋಡಿದಾಗ ಖಂಡಿಕಾ ಎಂದಿರುವುದು ಇದೇ ಜಲಪಾತವಿರಬೇಕೆಂದೆನೆಸಿತು. ಇರಬಹುದೇನೊ?
ತುಂಬಾ ದಿನಗಳ ನಂತರ ಚಿಕ್ಕದಾದರೂ ಚೊಕ್ಕದಾದ ಪ್ರವಾಸ ಮನಸ್ಸಿಗೆ ಮುದ ನೀಡಿತು.

Tuesday, June 7, 2011

ಕೇಂದ್ರ ಸರ್ಕಾರದ ನೀತಿಗಳು

ನಮ್ಮ ದೇಶದ ವಿರುದ್ದ ಹೋರಾಡುವ ಕಲ್ಲು ಹೊಡೆಸುವ ಗಿಲಾನಿ ದೆಹಲಿಗೆ ಬಂದರೆ ಕೆಂಪುಹಾಸಿನ ಸ್ವಾಗತ ಸಿಗುತ್ತೆ.
ಅಣ್ಣಾ ಹಜಾರೆ, ರಾಮ್ದೇವ್ ಬ್ರಷ್ಟಾಚಾರ ಕಪ್ಪುಹಣದ ವಿರುದ್ದ ಹೋರಾಡಿದ್ರೆ ಕತ್ತು ಹಿಡಿದು ಆಚೆ ನೂಕುತ್ತೆ.

ಕೇಂದ್ರ ಸರ್ಕಾರದ ಸ್ನೇಹಿತರು, ಎ.ರಾಜ, ಕನಿಮೋಳಿ, ಸುರೇಶ್ ಕಲ್ಮಾಡಿ, ದಯಾನಿಧಿ ಮಾರನ್, ಅಶೋಕ್ ಚವ್ಹಾಣ್, ಪಿ ಜೆ ಥಾಮಸ್.

ಶತ್ರುಗಳು ಅಣ್ಣಾಹಜಾರೆ, ರಾಮದೇವ್, ಅರವಿಂದ್ ಕೇಜ್ರಿವಾಲ, ಕಿರಣ್ ಬೇಡಿ, ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್.

ಒಂದು ಮಾತಿದೆ ಅವನು ಓದುವ ಪುಸ್ತಕ ತೋರಿಸು ಅವ್ನು ಎಂತವನು ಅಂತ ಹೇಳುತ್ತೇನೆ ಎಂದು. ಹಾಗೆಯೆ ನನಗನ್ನಿಸುತ್ತೆ ಅವನ ಮಿತ್ರರನ್ನು ತೋರಿಸು ಅವ್ನು ಎಂತಹವನು ಎಂದು ಹೇಳುತ್ತೇನೆಂದರೆ ಕಾಂಗ್ರೆಸ್ನ ಸ್ತಿತಿ ಏನಾಗ್ಬೇಕು?

ಇದೀಗ ತಾನೆ ದಿಗ್ವಿಜಯ್ ಸಿಂಗ್ ಎಂಬ ತಲೆತಿರುಕ ಒತ್ತಾಯಿಸುತ್ತಿದ್ದ, ರಾಜ್ಘಾಟ್ನಲ್ಲಿ ನೃತ್ಯ ಮಾಡಿದ್ದಕ್ಕೆ ಸುಷ್ಮಾ ಸ್ವರಾಜ್ ದೇಶದ ಕ್ಷಮೆ ಕೇಳ್ಬೇಕು ಅಂತ. ಎಂತ ವಿಪರ್ಯಾಸ ನೋಡಿ ರಾತ್ರೊ ರಾತ್ರಿ ಹೆಂಗಸರನ್ನು, ಮಕ್ಕಳನ್ನು ಲಾಠಿ ಏಟು ಕೊಟ್ಟ ನಿರ್ಮಾನುಷವಾಗಿ ಮಧ್ಯರಾತ್ರಿ ಪೆಂಡಾಲಿನಿಂದ ಹೊರಗಟ್ಟಿದ ಲಜ್ಜೆಗೆಟ್ಟವರು ಕ್ಷಮೆ ಕೇಳಬೇಕಿಲ್ಲ ಆದರೆ ಇವರು ಮಾಡಿದ್ದನ್ನ ಪ್ರಶ್ನಿಸಿದವರು ಕ್ಷಮೆ ಕೇಳ್ಬೇಕು. ಕಾಂಗ್ರೆಸ್ನ ನೀತಿಯೇ ಹೀಗಲ್ವ? ಅವರನ್ನು ಇಷ್ಟು ವರ್ಷಗಳ ಕಾಲ ಗೆಲ್ಸಿ ಅವರಿಂದ ಆಳಿಸಿಕೊಂಡಿದ್ದೇವಲ್ವ ನಮಗೆಲ್ಲ ಇದು ಸರಿಯಾದ ಶಿಕ್ಷೆಯೆ ಅಲ್ವೆ? we deserve it ಪಾಪ ಅವ್ರದ್ದೇನು ತಪ್ಪು.