Tuesday, August 16, 2011

ಪ್ರವಾಸ, ಪತ್ರಕರ್ತರ ಮನೆಯಲ್ಲಿ ವಾಸ ಮತ್ತು ಅನಿರೀಕ್ಷಿತ ಜಲಪಾತಗಳ ಸಹವಾಸ

ಶನಿವಾರದ ಉಪಾಕರ್ಮ ಆಚರಣೆ ಮುಗಿಸಿ ಪ್ರವಾಸಕ್ಕೆ ಹೊರಡುವ ನನ್ನ ಉತ್ಸಾಹಕ್ಕೆ ತಣ್ಣೀರೆರೆಚಿದ್ದು ಅಕ್ಕನ ಮಗ ಜಯಂತ. ನಾನೂ ಬರ್ತಿನಿ ಶನಿವಾರ ಸಂಜೆ ಹೊರಡೋಣವೆಂದು ವರಾತ ಹಚ್ಚಿದವನ್ನು ಮನದಲ್ಲೆ ಹಳಿಯುತ್ತ ಜಾಗಗಳನ್ನು ಹುಡುಕಲು ಪ್ರಯತ್ನಿಸಿದೆ.

ಉಹೂಂ ಯಾವ ಜಾಗಗಳು ಸರಿ ಹೊಂದಲಿಲ್ಲ. ನನ್ನ ಚಾರಣದ ಗುರುಗಳಾದ ರಾಜೇಶ್ ಕೂಡ ಸೂಚಿಸಿದ ಜಾಗಗಳು ಮಳೆಗಾಲದಲ್ಲಿ ಭೇಟಿಕೊಡಲು ಪ್ರಶಸ್ತ ತಾಣಗಳಲ್ಲವೆಂದು ಅವರೇ ತಿಳಿಸಿದಾಗ ನನಗೆ ಈ ಪ್ರವಾಸದ ಕತೆ ಅಷ್ಟೆ ಅನಿಸಿತ್ತು.

ಶರಾವತಿ ಟ್ರೆಕ್ಸ್ ನ ಸಂಪತ್ ನೀವು ಭಾನುವಾರ ಬೆಳಿಗ್ಗೆಯೆ ಇಲ್ಲಿ ತಲುಪಿದರೆ ಚಾರಣಕ್ಕೆ ಕರೆದೊಯ್ಯುವುದಾಗಿ ತಿಳಿಸಿದರು. ಆದರೆ ರಾತ್ರಿಯಲ್ಲಿ ವಾಹನ ಚಾಲನೆ ನನಗಾಗದ ವಿಷಯ ಅಪಾಯ ಕೂಡ. ವಿಧಿಯಿಲ್ಲದೆ ಕಳೆದ ಪ್ರವಾಸದಲ್ಲಿ ನೋಡಲಾಗದೆ ಬಿಟ್ಟಿದ್ದ ಒಂದು ಜಲಪಾತಕ್ಕೆ ಹೋಗಿ ಹಿಂತಿರುಗಲು ಯೋಚಿಸಿ ಬೆಳಿಗ್ಗೆ ಬೇಗನೆ ಸಿದ್ದವಾಗಲು ಸೂಚಿಸಿದೆ.

ಭಾನುವಾರ ಬೆಳಿಗ್ಗೆ ೫.೩೦ಕ್ಕೆ ಬೆಂಗಳೂರಿನಿಂದ ಹೊರಟು ನೋಡದೇ ಬಿಟ್ಟಿದ್ದ ಜಲಪಾತದ ಸಮೀಪದ ಊರಿನಲ್ಲಿರುವ ಏಕೈಕ ಸಸ್ಯಾಹಾರಿ ಹೋಟೆಲ್ಲಿನಲ್ಲಿ ಊಟಕ್ಕೆ ಕುಳಿತದ್ದು ನನ್ನ ಇಡೀ ಪ್ರವಾಸಕ್ಕೆ ಹೊಸ ತಿರುವು ಕೊಟ್ಟಿತು.



ನನ್ನ ಈ ಬಾರಿಯ ಪ್ರವಾಸಕ್ಕೆ ಅಚ್ಚರಿಯ ತಿರುವು ಕೊಟ್ಟ ಹೋಟೆಲ್ ಇದು. ಇದರ ಮಾಲಿಕ ಮನೋಹರ್ ಕೊಟ್ಟ ಮಾಹಿತಿ, ಒಂದೇ ಒಂದು ಜಲಪಾತ ನೋಡಲು ಬಂದ ನಮಗೆ ಮತ್ತೆ ೪ ಜಲಪಾತಗಳ ಅದರಲ್ಲೂ ಜನರಿಗೆ ಅತ್ಯಂತ ಕಡಿಮೆ ಪರಿಚಯವಿರುವ ಜಲಪಾತಗಳ ದರ್ಶನಕ್ಕೆ ಕಾರಣವಾಯ್ತು. ಅಂತರ್ಜಾಲದಲ್ಲೂ ಕೂಡ ಈ ಜಲಪಾತಗಳ ಬಗ್ಗೆ ಮಾಹಿತಿಯಿಲ್ಲ ಒಂದು ಜಲಪಾತದ ಬಗ್ಗೆ ಮಾತ್ರ ಒಂದೇ ಒಂದು ಮಾಹಿತಿಯಿದೆ. ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ಉದಯವಾಣಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದರೂ ಜನ ಸಂಪರ್ಕದಿಂದ ದೂರವೇ ಇರುವ ಜಲಪಾತಗಳ ದರ್ಶನ ತಂದ ಸಂತೋಷ ಅವರ್ಣನೀಯ. ಉಳಿಯಲು ಜಾಗ ಕೊಟ್ಟು ತಿಂಡಿ ಊಟ ಕೊಟ್ಟು ಸಲಹಿದ ಮಹೇಶ್ವರ ಭಟ್ಟರಿಗೂ ಅವರ ಪತ್ನಿ ಸಹನಾ ಅವರಿಗೂ ಧನ್ಯವಾದಗಳು. ಅವರ ಸಹಾಯ ಸ್ಮರಣೀಯ. ಪ್ರವಾಸ ಹೊರಟಾಗ ಸುಂದರ ಪ್ರವಾಸ ಇದಾಗುತ್ತದೆ ಎಂಬ ನಂಬಿಕೆಯಿರಲಿಲ್ಲ. ಮನೋಹರ ಆದರೆ ಅನಿರೀಕ್ಷಿತವಾಗಿ ಸಿಕ್ಕ ಈ ಜಲಪಾತಗಳ ಮಾಹಿತಿ, ಇಡೀ ಪ್ರವಾಸ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.



ಇದು ಜೀಪಿನಲ್ಲಿ ನಮ್ಮನ್ನು ಕರೆದೊಯ್ದ ಮೋಹನನ ಮನೆಯ ಬಳಿಯಿರುವ ಪುಟ್ಟ ಆದರೆ ಮನಮೋಹಕ ಜಲಪಾತ.
ಇಲ್ಲಿನ ಪ್ರತಿ ಮನೆಯಲ್ಲೂ ತಾವೆ ತಯಾರಿಸಿದ ವಿದ್ಯುತ್ ಬಳಸುವುದು ವಿಶೇಷ




ಕಣ್ಮನ ಸೋಲುವಷ್ಟು ಹಸಿರು, ನದಿ ಕಾಡು ಜಲಪಾತ ಈ ಪ್ರವಾಸದ ವಿಶೇಷ




ದಾರಿಯುದ್ದಕ್ಕೂ ಈ ನದಿ ಕಲ್ಲು ಬಂಡೆಗಳ ಮಧ್ಯೆ ಹರಿಯುತ್ತ ಇಂತಹ ಮನೋಹರ ದೃಶ್ಯಗಳ ಸರಣಿಯನ್ನೆ ಸೃಷ್ಟಿಸಿದೆ.




ದೂರದಿಂದ ಜಲಪಾತದ ಮೊದಲ ನೋಟ




ನಮ್ಮ ಆತಿಥೇಯರ ತೋಟದಲ್ಲಿರುವ ಸುಂದರ ಬೆಡಗಿ, ಚಿಕ್ಕದಾದರೂ ಸುಂದರ ಜಲಪಾತ.
ದಾರಿಯುದ್ದಕ್ಕೂ ಆನೆಲದ್ದಿಯ ದರ್ಶನ ವಿಶೇಷ. ಜಯಂತನಂತೂ ಓಡಲು ಸಿದ್ದವಾಗಿಯೇ ನಡೆಯುತ್ತಿದ್ದ.



ಜಲಪಾತದೆಡೆಗೆ ನಡೆಯುವಾಗ ಎದುರಾದ ಇಂತಹ ಹಲವಾರು ಸ್ಥಳಗಳು ಎದುರಾದವು




ನಮ್ಮ ಈ ಪ್ರವಾಸದಲ್ಲಿ ಸಿಕ್ಕ ಅತ್ಯಂತ ಸುಂದರ ಜಲಪಾತವಿದು. ಪ್ರವಾಸ ಹೊರಟು ಈ ಸ್ಥಳದ ಸಮೀಪವಿರುವ ಪ್ರಮುಖ ಊರಿಗೆ ಬಂದಾಗಲೂ ಇಂತದ್ದೊಂದು ಜಲಪಾತವಿದೆಯೆಂದು ನನಗೆ ತಿಳಿದಿರಲಿಲ್ಲ. ಗೂಗಲ್ ನಲ್ಲೂ ಕೂಡ ಕನ್ನಡ ಲಿಪಿಯೊಂದಿಗೆ ಹುಡುಕಿದಾಗ ಈ ಜಲಪಾತದ ಒಂದೇ ಒಂದು ಕೊಂಡಿ ಸಿಗುತ್ತದೆ. ಅದೂ ಕೂಡ ನಮ್ಮ ಆತಿಥೇಯರೇ ಬರೆದ ಲಖನ



ನಮ್ಮ ಪ್ರವಾಸಕ್ಕೆ ನೆರವಾದ ಮಹೇಶ್ವರ ಭಟ್ಟರೊಂದಿಗೆ



ಭಟ್ಟರ ಮನೆಯಲ್ಲಿ ಕೊಕೊ ಹಣ್ಣುಗಳ ರಾಶಿ




ಮಹೇಶ್ವರ ಭಟ್ಟರೊಂದಿಗೆ ಹೊಳೆದಾಟಲು ಕಾಲುಸಂಕದ ಮೇಲೆ





ಅನಿರೀಕ್ಷಿತವಾಗಿ ಸಿಕ್ಕ ಜಲಪಾತದಲ್ಲಿ ಅಮಿತ್, ಚಿತ್ರ ಮತ್ತು ಜಯಂತ್. ಈ ಜಲಪಾತದ ಬಗ್ಗೆ ಹೋಟೆಲ್ಲಿನ ಮನೋಹರ ಕೂಡ ಹೇಳಿರಲಿಲ್ಲ. ಸಹನಾ ಅವರ ಉದಯವಾಣಿಯಲ್ಲಿನ ಬರಹ ನನ್ನು ಸೆಳೆಯಿತು. ಹೌದಲ್ಲ ಇದನ್ನೂ ನೋಡಿ. ಈಗ ತುಂಬಾ ನೀರುಂಟು ಎಂದಿದ್ದು ಮಹೇಶ್ವರ ಭಟ್ಟರು. ಅವರ ಮನೆಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಜಲಪಾತವಿದು.




ಜಲಪಾತದೆಡೆಗೆ ಪುಟ್ಟ ಚಾರಣ




ಇದು ಈ ಜಲಪಾತದ ೨ನೇ ಹಂತವಂತೆ. ಈ ಜಲಪಾತಕ್ಕೆ ಬರುವವರನ್ನು ಅಲ್ಲಿರುವ ಪ್ರಭಾಕರಭಟ್ಟರ ಮನೆಯವರು ಪ್ರೋತ್ಸಾಹಿಸುವುದಿಲ್ಲ. ಅದಕ್ಕೆ ಅವರು ಕೊಡುವ ಕಾರಣ ಸಕಾರಣವೇ. ನಮಗೂ ಅವರು ಪೂರ್ವಾನುಮತಿಯಿತ್ತದ್ದು ಪ್ರಕಾಶ್ ಹೋಟೆಲ್ನ ಮನೋಹರನ ಮತ್ತು ಪತ್ರಕರ್ತೆ ಸಹನಾ ಅವರ ವಿನಂತಿಯ ಮೇರೆಗೆ.




ನೀರಿನಲ್ಲಿ ಮೋಜು




೧೫ ದಿನದ ಹಿಂದೆಯಷ್ಟೆ ಇಲ್ಲಿಗೆ ಭೇಟಿಯಿತ್ತಿದ್ದೆವು. ಇದರ ಪೂರ್ಣ ದೃಶ್ಯದ ದರ್ಶನವಾಗುವುದು ರಾಜ್ಯ ಹೆದ್ದಾರಿಯಲ್ಲಿಯೆ.

Tuesday, July 26, 2011

ಕೊಡಗಿನ ಜಲಪಾತಗಳ ಸರಣಿ, ದೇವರಗುಂಡಿ ಮತ್ತು ಕಲ್ಯಾಳ

೨೩ರ ಶನಿವಾರ ಎಡಕುಮೇರಿ ರೈಲು ಹಳಿಯ ಮೇಲೆ ಚಾರಣ ಹೋಗುವುದೆಂದು ನಿರ್ಧರಿಸಿದ್ದೆ. ಶುಕ್ರವಾರ ರಾತ್ರಿ ೧೦ ರವರೆಗೂ ಯಾಕೋ ಅದು ಸರಿ ಹೋಗುವುದಿಲ್ಲವೆಂಬ ಆತಂಕವಿತ್ತು. ಕೊನೆಗೆ ಕೈಗೊಂಡದ್ದು ಕೊಡಗಿನ ಕಡೆಗೆ ಪಯಣ. ಟಿವಿ೯ ನಲ್ಲಿ ಸಿಕ್ಕ ಮಾಹಿತಿಯನ್ನಾಧರಿಸಿ ಹೊರಟಾಗ ಸಿಕ್ಕದ್ದು ಈ ಜಲಪಾತಗಳು. ಒಂದು ಸುಂದರ ಪ್ರವಾಸದ ಅನುಭವ. ಅತ್ಯಂತ ಖುಷಿ ಕೊಟ್ಟ ಪ್ರವಾಸ.

ಕರಿಕೆಯ ದಾರಿಯಲ್ಲಿ ಕೊಡಗಿನ ಸುಂದರಿ


ಸುಳ್ಯದ ದಾರಿಯಲ್ಲಿ ಸಿಕ್ಕ ಜಲಪಾತ



ಇದೇ ಚಾರಣ



ಪಾರ್ಶ್ವ ನೋಟ



ಧುಮ್ಮಿಕ್ಕುವ ಪರಿ






ಕಣಿವೆಯ ನೋಟ



ಇದೊಂದು ವಿಚಿತ್ರ ಅನುಭವ. ಜಲಪಾತದ ಕೆಳಗೆ ನಿಂತು ಫೋಟೊ ತೆಗೆಯುವುದು ನಿಜಕ್ಕೂ ವಿಚಿತ್ರ. ಜಲಪಾತದ ಬುಡದಲ್ಲಿ ನಿಂತಾಗ ಕೆಳಗಿನ ಹೆದ್ದಾರಿಯಿಂದ ಕಾಣುವ ನೋಟ ಹತ್ತಿರದಿಂದ ಸಿಗದಿದ್ದರೂ, ಚಾರಣ ಅನುಭವ ಭಯಾನಕ. ಜಲಪಾತದ ಮುಂಭಾಗಕ್ಕೆ ಹೋಗಲು ಜಲಪಾತಕ್ಕೆ ಸಮಾನಾಂತರವಾಗಿ ಇಳಿಯಬೇಕು, ಇಳಿಯಲಿಕ್ಕೆ ಇರುವ ದಾರಿಯಲ್ಲಿ ಬೇರುಗಳು ಮರಗಿಡ ಕಲ್ಲುಗಳೆ ಆಸರೆ. ಅದೂ ಸುರಿದ ಸುರಿಯುತ್ತಿರುವ ಮಳೆಗೆ ಅಲ್ಲೂ ಜಲಪಾತದಷ್ಟೆ ನೀರು.


ಕಲ್ಯಾಳ ಜಲಪಾತದ ತಪ್ಪಲಿನಲ್ಲಿ ನಮ್ಮ ತಂಡ
ಎಡಗಡೆಯಿಂದ ಜಯಂತ್, ಅಮಿತ್, ಚಿತ್ರ ಮತ್ತು ನಾನು



ದೇವರಗುಂಡಿ ಜಲಪಾತ, ಎರಡು ಬಾರಿ ಹೊಳೆ ದಾಟಿ ಅಡಿಕೆ ತೋಟ ದಾಟಿ ಹೋಗಬೇಕು



ದೇವರಗುಂಡಿ ಜಲಪಾತ




ಇವು ಇರುವುದು ನಮ್ಮದೇ ನಾಡಿನಲ್ಲಿ



ಎಷ್ಟೂಂತ ಫೋಟೊ ತೆಗೆಯುವುದು



ಕೊಡಗಿನ ಸುಂದರಿಯರು, ಕೇರಳದ ಗಡಿಯಲ್ಲಿ



ಕ್ಯಾಮೆರ ಕೈಕೊಟ್ಟಿತ್ತು, ಮೊಬೈಲ್ ಕ್ಯಾಮೆರಾವೇ ಆಸರೆ


ಉತ್ತಮವಾದ ರಸ್ತೆ ಹಿತವಾದ ವಾತಾವರಣ ಸುಂದರ ಜಲಪಾತಗಳು ಸ್ವರ್ಗಕ್ಕೆ ದಾರಿ ಎಂದಾದರೂ ಬರೆಯಬೇಕಿತ್ತು



ರಸ್ತೆಗೂ ಧುಮ್ಮಿಕ್ಕುವ ಜಲಪಾತಗಳು


ಒಂದಕ್ಕಿಂತ ಒಂದು ಸುಂದರ ಮನೋಹರ ಜಲಪಾತಗಳು


೨೦ ಕಿ ಮೀ ಅಂತರದಲ್ಲಿ ೨೦ ಕ್ಕೂ ಹೆಚ್ಚು ಜಲಪಾತಗಳು ರಸ್ತೆಯ ಬದಿಯಲ್ಲಿಯೆ



ಭಾಗಮಂಡಲದಿಂದ ಮುಂದೆ ಸಿಕ್ಕ ಜಲಪಾತಗಳ ಸರಣಿ


ಮಳೆಗಾಲದ ಕೊಡಗಿನ ಜಲಪಾತ





ಸುಳ್ಯದ ಬಳಿಯಿರುವ ದೇವರಗುಂಡಿ ಜಲಪಾತ

Tuesday, June 21, 2011

ಪುತ್ರ ಶೋಕಂ ನಿರಂತರಂ. ವಿಕ್ಕಿಯ ಅಗಲಿಕೆಯ ನೋವು

ನಮ್ಮ ಮನೆಗೆ ಮೊದಲ ಬಾರಿ ಬಂದಾಗ "ವಿಕ್ರಂ ಭಾರದ್ವಾಜ್"


ಮನೆಗೆ ಬಂದ ಅಕ್ಕನ ಮಗ ಜಯಂತನೊಂದಿಗೆ



ಅರಸೀಕೆರೆಯ ವಸತಿಗೃಹವೊಂದರಲ್ಲಿ ರಾತ್ರಿ ತಂಗಿದ್ದಾಗ. ಎಲ್ಲಿ ಮಲಗ್ತಿಯೋ ವಿಕ್ಕಿ ಎಂದು ಕೇಳಿದಾಗ ಸೀದಾ ಹೋಗಿ ಮಲಗಿದ್ದು ಇಲ್ಲಿ. ವಸತಿ ಗೃಹದವ ಮೊದಲು ಸಾಕುಪ್ರಾಣಿಗಳಿಗೆ ಅನುಮತಿಯಿಲ್ಲ ಎಂದಿದ್ದ. ನನ್ನ ಮಾತು ಕೇಳುತ್ತಿದ್ದ ಇವನನ್ನು ನೋಡಿ, ತುಂಬಾ ಒಳ್ಳೆದು ಸಾರ್ ನಿಮ್ ನಾಯಿ ಮಲಗ್ಸಿ ಆದ್ರೆ ಹಾಸಿಗೆ ಮೇಲೆ ಬೇಡ ಎಂದಿದ್ದ


ಗೇಟ್ ಕಾಣುವಂತೆ ಮನೆಯೊಳಗೇ ಮಲಗುತ್ತಿದ್ದ ಅವನ ಪ್ರೀತಿಯ ಸ್ಥಳ


ಅಮಿತನ ಟ್ರೈಸಿಕಲ್ ಮೇಲೆ ಕುಳಿತಾಗ, ಇಂತಹ ತರಲೆಗಳಿಂದಲೆ ನಮ್ಮ ಮನ ಗೆದ್ದವ


ಮುದ್ದು ಮುದ್ದಾಗಿ ನೋಡುಗರನ್ನು ಆಕರ್ಷಿಸುತ್ತಿದ್ದ ತರಲೆ ಸುಬ್ಬ


ಅಮಿತ್ ಭಾರದ್ವಾಜನೊಂದಿಗೆ


ಸ್ನಾನ ಮಾಡಿದ ನಂತರ ದಿವಾನಾ ಮೇಲೆ ಮಲಗಬೇಕು ವಿಕ್ಕಿ ಮತ್ತು ಗುಂಡ ( ೪ ವರ್ಷದ ಹಿಂದೆ ಮನೆ ಬಿಟ್ಟು ಓಡಿ ಹೋದ)



ನನ್ನೊಡನೆ ಆಟವಾಡಲು ಆಹ್ವಾನಿಸುತ್ತಿದ್ದ ಭಂಗಿ


ಬೈಕ್ ಪ್ರಯಾಣ ಅಚ್ಚುಮೆಚ್ಚು


ಕೋಪ ಬಂದಾಗ ದಿವಾನ ಕೆಳಗೆ ಅವಿತುಕೊಳ್ಳುತ್ತಿದ್ದ ಪರಿ


ಮನೆಯೊಳಗೆ ಬಂದ ಹಾರಾಡುವ ಹುಳುಗಳನ್ನು ಹುಡುಕಿ ಓಡಿಸುವಾಗ


ನನ್ನೊಡನೆ ಜಗಳವಾಡುವಾಗಿನ ಭಂಗಿ


ನಂದಿ ಬೆಟ್ಟದಲ್ಲಿ ನಮ್ಮ ಕುಟುಂಬದೊಡನೆ



ನಂದಿ ಬೆಟ್ಟದಲ್ಲಿ ನಮ್ಮಕ್ಕ ಭಾವನ ಜೊತೆ



ಕಾಲು ಚಾಚಿ ಮಲಗುವುದು ತುಂಬಾ ಇಷ್ಟ



ಹೆದರಿಸುವುದಕ್ಕೆಂದು ಇಟ್ಟಿದ್ದ ಕೋಲನ್ನೆ ಕಿತ್ತಿಟ್ಟುಕೊಂಡ ಭೂಪ, ನನ್ನ ಪಾಪ





ನಿತ್ಯ ಕಾಯಕದಲ್ಲಿ ನಿರತ


ಮನೆ ಮೇಲೆ ನಿಂತು ಬೊಗಳುವುದು ಅವನ ಅತ್ಯಂತ ಪ್ರೀತಿಯ ಕೆಲಸ


೭ ಬಾರಿ ಕಳ್ಳನನ್ನು ಒಳಗೆ ಬಿಡದೇ ಮನೆ ಕಾಯ್ದಿದ್ದ


ಅದು ನಾಯಿಯಲ್ಲ ನಮ್ಮೆಲ್ಲರ ಆತ್ಮೀಯ ಮನೆಯ ಸದಸ್ಯನಾಗಿದ್ದ. ನನ್ನ ಮಗನಿಗೆ ಅಣ್ಣನೇ ಆಗಿದ್ದ

ನಮ್ಮಮ್ಮನ ಪ್ರೀತಿಯ ಮೊಮ್ಮಗ


ಜಿ ಕೆ ವಿ ಕೆ ಯಲ್ಲಿ ವಿಹರಿಸುವಾಗ

ಅವನ ಅತ್ಯಂತ ಪ್ರೀತಿಯ ಜಾಗ

ನಮ್ಮನ್ನಗಲಿದ ನಮ್ಮ ಅತ್ಯಂತ ಆತ್ಮೀಯ ಸ್ನೇಹಿತ ವಿಕ್ಕಿ. ಮತ್ತೆ ಬಾ ಪುಟ್ಟ


ನನ್ನ ಜೀವವಿರುವವರೆಗೆ ನಿನ್ನ ನೆನಪು ನನ್ನಲ್ಲಿ ಅಮರ. ಹೋದೆಯ ಗೆಳೆಯ, ಮತ್ತೆ ಹುಟ್ಟಿ ಬಾ ಮುಂದೊಂದು ದಿನ ನನ್ನ ಬಾಳಿನಲ್ಲಿ