
ಹೊರನಾಡಿನ ಸುತ್ತಮುತ್ತ ಸಾಕಷ್ಟು ಆಕರ್ಷಕ ಪ್ರದೇಶಗಳಿವೆಯೆಂದು ತಿಳಿದಾಗಲಿಂದ ಹೋಗಲೇ ಬೇಕೆನ್ನುವ ನನ್ನ ತವಕ ತೀರಿದ್ದು ಮೇ ೯-೧೧ ರವರೆಗೆ ಅಲ್ಲೆಲ್ಲ ಓಡಾಡಿ ಬಂದಾಗ. ಊಟ ಮತ್ತು ವಸತಿ ಸೌಕರ್ಯ ಒದಗಿಸಿಕೊಟ್ಟು ನನ್ನ ಕೊರೆತವನ್ನೂ ಸಹಿಸಿಕೊಂಡ
ಶ್ರೀ ರಾಘವೇಂದ್ರ ನಾವಡರು ಮತ್ತು ಶ್ರೀಮತಿ ಮಂಜುಳ ನಾವಡ ಅವರಿಗೆ ಧನ್ಯವಾದಗಳು.

ನನ್ನ ಹುಚ್ಚಿಗೆ ಬಲಿಯಾದವರು

ದುರ್ಗದ ದಾರಿಯಲ್ಲಿ

ದುರ್ಗದ ಕಡೆಗೆ ನಡಿಗೆ

ದುರ್ಗದಿಂದ ಮನಮೋಹಕ ದೃಶ್ಯ

ಇಂತಹ ಹೂಗಳು ನಾಡಿನಲ್ಲೇಕೆ ಕಾಣುವುದಿಲ್ಲ???

ಕಟ್ಟಿ ತಂದ ಬುತ್ತಿಯ ವನಭೋಜನ

ದೂರದಲ್ಲಿ ಕಾಣುವ ದುರ್ಗ, ನಮ್ಮ ಗುರಿ

ದುರ್ಗದಹಳ್ಳಿಯಿಂದ ಹಿಂತಿರುಗುವಾಗ ಸಿಗುವ ದೇವಳದ ಬಳಿ ಕಂಡ ಪುರಾತನ ಸಂಪಿಗೆ ಮರ

ಬಲ್ಲಾಳರಾಯನ ದುರ್ಗದ ದಾರಿಯಲ್ಲಿ ಬಂಗಾಡಿ ಮತ್ತು ಕಿಲ್ಲೂರು ಇಲ್ಲಿಂದ ವೀಕ್ಷಣೆಗೆ ಲಭ್ಯ

ಒಂದು ತುದಿಯಿಂದ ಮತ್ತೊಂದು ತುದಿಗೆ ಹೋದಾಗ ನಮ್ಮ ಜೀಪ್ ಕಂಡಿದ್ದು ಹೀಗೆ ಹಸಿರಿನ ಮಧ್ಯೆ ಕರಗಿ ಹೋದ ಜೀಪ್

ಕ್ಯಾತನಮಕ್ಕಿಯಿಂದ ಒಂದು ಹಸಿರು ನೋಟ

ಕಾಡಿನ ನಡುವೆ ನಾವೂ ಪ್ರಾಣಿಗಳಲ್ವೆ? ಅದಕ್ಕೆ ಹೀಗೆ

ವನಸುಮ

ಕ್ಯಾತನಮಕ್ಕಿಯಿಂದ ಕೆಳಗಿಳಿದು ನಡೆದಾಗ ಸಿಕ್ಕ ಸಣ್ಣ ಝರಿ

ಕಳಸದ ಸಮೀಪ ನಮ್ಮ ಜೀಪ್ ಚಾಲಕ ಮತ್ತು ಮಾರ್ಗ ದರ್ಶಕ ’ದೊರೆ’ ತೋರಿಸಿದ ಜಲಪಾತ ಹೆಸರಿಲ್ಲ (ಅವನಿಗೂ ಹತ್ತಿರದ ಮನೆಯವರಿಗೂ ಗೊತ್ತಿಲ್ಲ)

ಹೊರ ನಾಡಿನ ಸಮೀಪದ ಭದ್ರೆಯ ತೂಗು ಸೇತುವೆ ಬಳಿ,
ಇಲ್ಲಿ ನೀರಿನಲ್ಲಿ ಹಾವು ಕಂಡ ಅಮಿತ್ ಮತ್ತು ರಿಷಿ ಓಡಿದ್ದು ನೆನಪಿಸಿಕೊಂಡ್ರೆ ಈಗ್ಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ

ಅಂಬಾತೀರ್ಥ ಬಳಿ ಕಾಣುವ ನಿಸರ್ಗ ಕೊರೆದ ಕಲೆ

ಅಂಬಾತೀರ್ಥದ ಭದ್ರೆ

ಅಂಬಾತೀರ್ಥದಲ್ಲಿನ ಬಂಡೆಗಳಲ್ಲಿ ಮೂಡಿದ ಮನಮೋಹಕ ಕಲೆ, ಹೊರನಾಡಿನ ಸಮೀಪ

ಶೃಂಗೇರಿಯ ಸಮೀಪದ ಮಗೇಬೈಲು ಜಲಪಾತದ ಬಳಿ ಅಮಿತ್ ಮತ್ತು ರಿಷಿ

ಹೊರನಾಡಿನ ಸಮೀಪ ಕ್ಯಾತನಮಕ್ಕಿ
3 comments:
ಮಗೆಬೈಲು! ನನಗೂ ಅಲ್ಲಿಗೆ ಹೋಗ್ಬೇಕು!
ನಿಮ್ಮ ಫೋನ್ಗೆ ಕರೆ ಮಾಡಿ ಸುಸ್ತಾಗಿ ಹೋಯ್ತು. ಸಂದೇಶಕ್ಕೂ ನೀವು ಉತ್ತರಿಸಲಿಲ್ಲ. ತುಂಬಾ ಸುಲಭ ಆದ್ರೆ ಸಿಕ್ಕಾಪಟ್ಟೆ ಜಿಗಣೆಗಳು.
ವರ್ಣಚಿತ್ರಗಳ ಭೂರಿ ಭೋಜನ! ನಮ್ಮೂರಿನ ವರ್ಣಚಿತ್ರಗಳನ್ನು ನೋಡಿ ಸ೦ತಸವಾಯಿತು. ನಿಮ್ಮ ಚಾರಣ ಛಾಯಾಗ್ರಹಣ ಮು೦ದುವರೆಯಲಿ.
ನಮಸ್ಕಾರಗಳು.
Post a Comment