Wednesday, July 28, 2010

ಹಿಂದೂ ಎನ್ನಲು ಹಿಂಜರಿಕೆಯೇಕೆ?

ನಿಮ್ಮ ಊಹೆ ಸರಿ ಹಿಂದೂಗಳ ಸಂಕೋಚ ಸ್ವಭಾವದ ಬಗ್ಗೆಯೆ ನಾನು ಕೇಳುತ್ತಿರುವುದು. ಅಲ್ಲ ಈ ಹಿಂದೂಗಳಿಗೇನಾಗಿದೆ? ತಾನು ಹಿಂದೂ ಹೆಮ್ಮೆಯಿಂದ ಹೇಳಿಕೊಳ್ಳುವುದಿರಲಿ, ಅದಕ್ಕೆ ನಾಚಿಕೆ ಪಟ್ಟುಕೊಳ್ಳುವುದೇಕೆ?
ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಹಿಂದೂಗಳನ್ನು ಗಮನಿಸಿ ಹಿಂದೂಗಳ ಪರವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನು ಜಾತ್ಯಾತೀತ (ಧರ್ಮಾತೀತ ಅಥವ ಸೆಕ್ಯುಲರ್) ಎಂದೇ ಬಿಂಬಿಸಿಕೊಳ್ಳಲು ಇಚ್ಚಿಸುತ್ತಾರೆ. ನಾವು ಬಲಪಂಥೀಯರಲ್ಲ ಎಡಪಂಥೀಯರೂ ಅಲ್ಲ ನಡುಪಂಥೀಯರೆಂದು ಇತ್ತೀಚೆಗೆ ಹೇಳಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಏಕೆ ಹೀಗೆ? ಹಿಂದೂ ಎನ್ನುವುದು ಅಸ್ಪೃಷ್ಯವೆ? ಹೀಗೆ ಹಿಂಜರಿಕೆ ಬೆಳೆಸಿಕೊಳ್ಳಲು ಹಿಂದೂಗಳು ಮಾಡಿರುವ ಅಂತಹ ಅಪರಾಧ ಯಾವುದು?
ಇರಬಹುದು ನಮ್ಮಲ್ಲೂ ಕೆಲವು ಕೆಟ್ಟ ಆಚರಣೆಗಳು ಬೆಳೆದು ಬಂದಿರಬಹುದು ಎಲ್ಲ ಧರ್ಮಗಳಲ್ಲೂ (ಧರ್ಮ ಮತ ಪಂಥ ಎಂಬ ವಿಭಿನ್ನ ಪದಗಳನ್ನು ಬಳಸಿಲ್ಲ, ಸಾಮಾನ್ಯ ಮನುಷ್ಯನಾಗಿ ಧರ್ಮವೆಂದು ಕರೆದಿದ್ದೇನೆ) ಇರುವ ಅಥ ಇರದ ಹುಳುಕುಗಳು ಹಿಂದೂ ಪದ್ದತಿಯಲ್ಲಿ ಬೆಳೆದು ಬಂದಿರಬಹುದು, ಅದೇ ಸಮಯಕ್ಕೆ ಅಂತಹ ಕೆಟ್ತ ಪದ್ದತಿಯನ್ನು ಮೈಕೊಡವಿಕೊಂಡು ಹಿಂದೆ ಬಿಡುವುದಕ್ಕೆ ಬದಲಾವಣೆಗೊಳ್ಳುವುದಕ್ಕೆ ತೆರೆದು ಕೊಂಡಿರುವ ಏಕೈಕ ಧರ್ಮ ಹಿಂದುತ್ವ. ಯಾರನ್ನೂ ನೋಯಿಸದ ದೇವಸ್ಥಾನಕ್ಕೆ ಬರಲೇ ಬೇಕು, ವಾರಕ್ಕೊಮ್ಮೆಯಾದರೂ ಪ್ರಾರ್ಥನೆ ಮಾಡಲೇ ಬೇಕು ಎನ್ನುವ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೊನೆಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ಒಪ್ಪಿಕೊಳ್ಳುವ ಏಕೈಕ ಧರ್ಮ ಆದರೂ ಈ ಹಿಂಜರಿಕೆ ಏಕೆ? ವಿಜ್ಞಾನವನ್ನು ಸತ್ಯವನ್ನು ಒಪ್ಪಿಕೊಳ್ಳುವ ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ ಎನ್ನುವ ಧ್ಯೇಯೋದ್ದೇಶ ಹೊಂದಿರುವುದು ತಪ್ಪೆ? ಎಲ್ಲರನ್ನೂ ತನ್ನಂತೆ ಕಾಣುವ ವಿಶಾಲ ಮನೋಭಾವದಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದು ಕೊಂಡಿದ್ದರೂ ನಮಗೇಕೆ ಇನ್ನೂ ಬುದ್ದಿ ಬಂದಿಲ್ಲ? ಭಾರತದಿಂದ ಹೊರದೂಡಲ್ಪಟ್ಟರೆ ಹಿಂದೂಗಳಿಗೆ ಆಶ್ರಯ ಎಲ್ಲಿ? ಆರೆಸ್ಸೆಸ್ ಎಂದಾಕ್ಷಣ ಹಾವು ಮೇಲೆ ಬಿದ್ದವರಂತೆ ಹೌಹಾರುವುದೇಕೆ? ಅವರು ಎಷ್ಟು ಜನರನ್ನು ಬಾಂಬಿಟ್ಟು ಉಡಾಯಿಸಿದ್ದಾರೆ? ಇತರರನ್ನು ನೋಡಿ ಕಲಿಯಬಾರದೇಕೆ? ಈಗಾಗಲೆ ಅಫ್ಗಾನಿಸ್ತಾನದಿಂದ ದೆಹಲಿಯವರೆಗೆ ನಮಗೆ ಹಿಂಜರಿತ ಉಂಟಾಗಿದೆ ಈಶಾನ್ಯ ರಾಜ್ಯಗಳು ಈಗಾಗಲೆ ಕ್ರಿಶ್ಚಿಯನ್ ಮಯವಾಗಿವೆ. ಕೇರಳ ಸಧ್ಯದಲ್ಲೆ ಮುಸ್ಲಿಂ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಉತ್ತರಪ್ರದೇಶದಲ್ಲಿ ೫೨% ಇರುವ ಮುಸ್ಲಿಮರು ಅಲ್ಪ ಸಂಖ್ಯಾತರಲ್ಲ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಬಿಹಾರದಲ್ಲಿ ಮುಸ್ಲಿಮನೊಬ್ಬನನ್ನು ಮುಖ್ಯಮಂತ್ರಿಯಾಗಲೂ ಸರ್ವ ಸರ್ಕಾರಗಳಲ್ಲೂ ಮಂತ್ರಿಗಿರಿ ಗಿಟ್ಟಿಸುವವನೊಬ್ಬ ಪ್ರಯತ್ನಿಸುತ್ತಾನೆ.

ಭಯೋತ್ಪಾದಕರನ್ನೆ ಸಮರ್ಥಿಸುವ ಝಾಕಿರ್ ನಮಗೆ ಮಾದರಿಯಾಗದಿದ್ದರೂ ಆಸ್ಟ್ರೇಲಿಯಾದ ಪ್ರಧಾನಿ ನಮ್ಮದು ಕ್ರಿಶ್ಚಿಯನ್ ದೇಶ ಇಲ್ಲಿ ನಮ್ಮಂತೆ ನಡೆಯುವುದಿದ್ದರೆ ಬನ್ನಿ ಎನ್ನುವ ಅವರ ಮಾತುಗಳು ನಮಗೆ ಮಾದರಿಯಾಗಬೇಕಲ್ಲವೆ?

2 comments:

KALADAKANNADI said...

ಹಿ೦ದೂ ಎ೦ದು ಬಹಿರ೦ಗವಾಗಿ ಹೇಳಿದರೆ ಸ೦ವಿಧಾನಾತ್ಮಕ ಅಪರಾಧ!ಭಾರತದ೦ಥಹ ಸೆಕ್ಯುಲರ್ ದೇಶದಲ್ಲಿ ‘ದಲಿತ‘ ಪದದ ಉಪಯೋಗ ಅಪರಾಧವೆ೦ದ೦ತೆ ಮು೦ದೊ೦ದು ದಿನ ‘ಹಿ೦ದೂ‘ ಎ೦ದು ಹೇಳಿಕೊಳ್ಳುವುದೂ ಅಪರಾಧವೆ೦ಬ ಕಾನೂನು ಬರಬಹುದು!.
ಲೇಖನ ಮೆಚ್ಚಿಗೆಯಾಯಿತು. ಬಹಳ ದಿನಗಳ ನ೦ತರದ ಲೇಖನ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ಸುಬ್ರಮಣ್ಯ said...

ನಮಸ್ಕಾರ.
ಯಾರದ್ದೋ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ.
ಕ್ಯಾತನಮಕ್ಕಿಗೆ ನಾನು (ಬೇಸಿಗೆಯಲ್ಲಿ) ಹೋದಾಗ ತೆಗೆದ ಫೋಟೋಗಳು ನನ್ನ ಈ ಬ್ಲಾಗ್ನಲ್ಲಿ-http://machikoppa.blogspot.com/2010/03/blog-post_02.html

ಹಾಗೂ ಡೆಮೋಗ್ರಾಫಿ ಬಗ್ಗೆ ನನ್ನ ಬ್ಲಾಗಿನಲ್ಲಿ ಇತ್ತೀಚಿನ ಲೇಖನ-
http://machikoppa.blogspot.com/2010/08/demography.html

ಓದಿ ಕಾಮೆಂಟ್ಸಿ!!!