
ನಮ್ಮ ಪ್ರವಾಸದ ಕೊನೆಯ ತಾಣ, ನಾಗರಹೊಳೆಯಲ್ಲಿ ಹಿಂಡು ಹಿಂಡಾಗಿ ಕಾಣಸಿಗುವ ಚಿಗರೆಗಳು

ಬ್ರಹ್ಮಗಿರಿಯ ತಪ್ಪಲಿನಲ್ಲಿರುವ ಕೊಡಗಿನ ಸುಪ್ರಸಿದ್ದ ಇರ್ಪು ಜಲಪಾತ

ಪ್ರವಾಸದ ತಂಡ, ಚೇಲಾವರದ ಮುಂಭಾಗದಲ್ಲಿ

ಚೆಯ್ಯಾಂಡಣೆಯ ಬಳಿಯ ಚೇಲಾವರದ ಜಲಪಾತ

ಚೇಲಾವರ ಫಾಲ್ಸ್ ಉಂಟಾಗುವ ಸ್ಥಳದಲ್ಲಿ ಕಾಣುವ ನೋಟ

ಮಾದಂಡಬ್ಬಿ ಜಲಪಾತ

ಇಗ್ಗುತ್ತಪ್ಪ ದೇವಸ್ಥಾನದಿಂದ ಕಾಣುವ ಜಲಪಾತ. ಇದೂ ಕೂಡ ಮುಂಭಾಗದಿಂದ ಫೋಟೊ ತೆಗೆಯಲು ಕಾಡಿನಲ್ಲಿ ಇಲ್ಲದ ದಾರಿಯಲ್ಲಿ ಚಾರಣ ಕೈಗೊಳ್ಳ ಬೇಕು

ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ಬಳಿ ಕಂಡ ತಾವರೆ, ಇದು ಕಂಡದ್ದು ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದ ದಿನ. ಹಾಂ! ಕೊಡಗು ಪ್ರವಾಸದಲ್ಲಿ ಯಾವುದೇ ವಾರ್ತೆಗಳು ನಮ್ಮ ಕಿವಿಗೆ ಬೀಳಲಿಲ್ಲ ರಾಜಕೀಯ ನಾಟಕಗಳಂತೂ ದೂರವೇ ಉಳಿದಿತ್ತು.

ಅಬ್ಬಿ ಜಲಪಾತದ ಪೂರ್ಣ ದೃಶ್ಯ

ಮಾಂದಾಲಪಟ್ಟಿ, ಪುಷ್ಪಗಿರಿ ಶ್ರೇಣಿಯ ಬೆಟ್ಟದ ಶಿಖರ. ಸುಂದರ ಮನಮೋಹಕ ದೃಶ್ಯಗಳನ್ನೊಳಗೊಂದ ಬೆಟ್ಟ ಸಾಲು

ಕೊಡಗಿನ ಅತ್ಯಂತ ಪ್ರಸಿದ್ದ ಅಬ್ಬಿ ಜಲಪಾತ. ಮಡಿಕೇರಿಯ ಮೋರಿ ನೀರು ಇದರಲ್ಲಿ ಸೇರುತ್ತದೆ ಎಂಬುದು ಕೆಲವರ ಆರೋಪ.

ನಾಪಂಡಪೊಳೆ, ರಸ್ತೆ ಪಕ್ಕದಲ್ಲಿಯೆ ಸಿಗುವ ಜಲಪಾತ. ಹೆಚ್ಚು ಪ್ರಸಿದ್ದವಲ್ಲ ಕೊಡಗಿನ ಜಲಪಾತ. ಜಲಪಾತವೆನ್ನುವುದು ಸೂಕ್ತವಲ್ಲವೆನೋ? ಸ್ವಲ್ಪ ಕಡಿದಾದ ಇಳಿಜಾರಿನ ಜಾರಿ ಬರುವ ಹೊಳೆ ಕೊನೆಯಲ್ಲಿ ಚಿಕ್ಕದಾಗಿ ಧುಮುಕುತ್ತದೆ. ಆದರೂ ಒಮ್ಮೆ ನೋಡಬೇಕಾದ ಜಲಪಾತ!

ಅದೇ ಹೊಳೆ ಹರಿದು ಮತ್ತೊಂದು ಜಾಗದಲ್ಲಿ ಸಣ್ಣ ಬಂಡೆಯ ಮೇಲೆ ಹರಿವ ಪರಿ. ರಾತ್ರಿ ಡೇರೆ ಹಾಕಿ ತಂಗಲು ಪ್ರಶಸ್ಥವಾದ ಸ್ಥಳ ಎಂಬುದು ನನ್ನ ಅನಿಸಿಕೆ.

ಜಲಪಾತದ ಮೇಲ್ಭಾಗದಿಂದ ತೆಗೆದ ಫೋಟೊ.

ಕೋಟೆ ಬೆಟ್ಟದ ಸಮೀಪವಿರುವ ಹೆಸರು ಗೊತ್ತಿಲ್ಲದ ಜಲಪಾತ. ಮುಂಭಾಗದಿಂದ ಫೋಟೊ ತೆಗೆಯುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ನಡೆದು ಸೇರಿದ್ದು ಜಲಪಾತದ ಮೇಲ್ಭಾಗ. ಅಲ್ಲಿಂದ ಕೆಳಗಿಳಿದು ಛಾಯಾಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ.
ಎಲ್ಲ ಚಿತ್ರಗಳನ್ನು ನೋಡಲು ಇಲ್ಲಿ ಭೇಟಿ ಕೊಡಿ
4 comments:
ಸುಂದರ ಚಿತ್ರಗಳು
ಪ್ರಸನ್ನರೇ,ಸು೦ದರ ಚಿತ್ರಗಳು. ಮಡಿಕೇರಿಗೆ ಯಾವಾಗ ಚಾರಣ ಕೈಗೊ೦ಡ್ರಿ?
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಸುಂದರ ಚಿತ್ರಗಳು ಸರ್, ಈ ಸುಂದರಿಯರನ್ನ ನೋಡಲು ಯಾವ ದಾರಿಯಿಂದ ಹೇಗೆ ತಲುಪಿದಿರೆಂದು ಹೇಳಿದ್ದರೆ ಇನ್ನು ಚೆನ್ನಾಗಿರುತ್ತದೆ.
ಧನ್ಯವಾದಗಳು ಸುಬ್ರಮಣ್ಯ ಅವರಿಗೆ
ಮಡಿಕೇರಿಗೆ ಬರೀ ಪ್ರವಾಸ ನಾವಡರೆ, ಚಾರಣದ ಬದಲು ಜೀಪ್ ಉಪಯೋಗಿಸಬೇಕಾಯ್ತು
ಪ್ರಶಾಂತ್, ನನ್ನ ಚಾರಣದ ಗುರುಗಳ ಅಪ್ಪಣೆಯ ಮೇರೆಗೆ ಅಲ್ಲಿಗೆ ಹೋಗುವ ದಾರಿಯನ್ನು ಬೇಕೆಂದೆ ತಿಳಿಸಿಲ್ಲ, ಸುಂದರಿಯರು ಚಿರಸುಂದರಿಯಾಗೇ ಇರಲೆಂಬ ಆಶಯದೊಂದಿಗೆ.....
Post a Comment