Thursday, April 7, 2011

ನಿಲುನೆಯಲ್ಲೊಂದಿಷ್ಟು ಉತ್ತಮ ಚರ್ಚೆಗಳಿವೆ ನೋಡಿ

ನಿಲುಮೆ ಬ್ಲಾಗಿನಲ್ಲಿ ಕನ್ನಡದ ಬಗ್ಗೆ ಭರಪೂರ ಚರ್ಚೆಗಳಿವೆ ಆಸಕ್ತಿದಾಯಕವಾಗಿವೆ, ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ, ಗಮನಿಸಿ. ಕೆಲವು ಅನವಶ್ಯಕ ಪ್ರತಿಕ್ರಿಯೆಗಳಿವೆ (ನಾನೇ ಮೇಲು ಎನ್ನುವ ಅಹಂಕಾರದಿಂದ ಬಂದವು) ಅವನ್ನು ಒತ್ತಟ್ಟಿಗಿಟ್ಟರೆ ಒಳ್ಳೆಯ ಚರ್ಚೆ ನೋಡಲು ಸಿಗುತ್ತದೆ.

ಅಜಕ್ಕಳ ಗಿರೀಶ್ ಭಟ್ಟರ ಲೇಖನ

ಅದಕ್ಕೊಂದು ಪ್ರತಿಕ್ರಿಯಾತ್ಮಕ ಲೇಖನ

ಅಜಕ್ಕಳರ ಮತ್ತೊಂದು ಲೇಖನ ಮುಂದುವರೆದ ಭಾಗವೆ?

ಅದಕ್ಕೊಂದು ಮಾರುತ್ತರ (ಮಾಮೂಲಿನಂತೆ ಇಲ್ಲಿನ ಪ್ರತಿಕ್ರಿಯೆಗಳಲ್ಲಿ ಅಹಂ ನ ತಾಕಲಾಟವಿದೆ ಹೊರತು ಪಡಿಸಿದರೆ ಉತ್ತಮ ಚರ್ಚೆ)

ನಿಲುಮೆ ತಂಡಕ್ಕೊಂದು ಧನ್ಯವಾದ ಅಲ್ಲಲ್ಲ ನನ್ನಿ ;)

Tuesday, March 1, 2011

ವೇದಗಳೇಕೆ ಎಲ್ಲ ಜನಕ್ಕೆ ಸಿಗಲಿಲ್ಲ!

ಪ್ರೊ ಕೆ ಎಸ್ ನಾರಾಯಣಾಚಾರ್ಯರ ವೇದ ಸಂಸ್ಕೃತಿಯ ಪರಿಚಯ ಸಂಪುಟ-೨ ಓದುತ್ತಿದ್ದಾಗ ನನಗೆ ಹೊಳೆದದ್ದು. ವೇದಗಳನ್ನು ಮುಚ್ಚಿಟ್ಟರು, ಅದು ತಪ್ಪು. ಜ್ಞಾನ ಎಲ್ಲರಿಗೂ ಹಂಚಬೇಕಿತ್ತು ಎನ್ನುವುದು ಎಲ್ಲರೂ ಮಾಡುವ ವಾದ ಅಲ್ಲವೆ?

ಆದರೆ ಸರಿಯಾದ ಶಿಷ್ಯ ಸಿಗದ ಹೊರತು ವೇದಗಳನ್ನು ಕೊಡತಕ್ಕುದಲ್ಲ ಎನ್ನುತ್ತದೆ ಈ ಮಂತ್ರ

ಊಷರೇ ನಿವಪೇತ್ ಬೀಜಂ ಶಣ್ದೇ ಕನ್ಯಾಂ ಪ್ರಯೋಜಯೇತ್|
ಸೃಜೇದ್ವಾ ವಾನರೇ ಮಾಲಾಂ ನಾಪಾತ್ರೇ ಶಾಸ್ತ್ರಮುತ್ಸೃಜೇತ್|| (ಶಾಂಡಿಲ್ಯ ಸ್ಮೃತಿ Vi-258)

"ಬಂಜರು ಭೂಮಿಯಲ್ಲಿ ಬೇಕಾದರೂ ಬೀಜಗಳನ್ನು ಬಿತ್ತಬಹುದು, ಷಂಡನಿಗಾದರೂ ಕನ್ಯೆಯನ್ನು ಕೊಡಬಹುದು. ಮಂಗನ ಕೈಯಲ್ಲಿ ಮಾಲೆಯನ್ನಾದರೂ ಕೊಡಬಹುದು, ಆದರೆ ವಿದ್ಯೆಯನ್ನು ಎಂತಹ ಆಪತ್ಕಾಲದಲ್ಲಿಯೂ ಅಪಾತ್ರನಿಗೆ ಕೊಡತಕ್ಕದ್ದಲ್ಲ". ಗುರುವಿನ ಶರೀರದೊಡನೆಯೆ ಭಸ್ಮವಾಗಿ ಹೋದರೂ ಸರಿಯೆ.

ನಾಚೀಕೇತವಿದ್ಯೆಯನ್ನು ವಿವರಿಸುವಾಗ ಬಂದಿರುವ ಉಲ್ಲೇಖಗಳಿವು.

ವೇದಗಳ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿದುಕೊಳ್ಳುವ ಕುತೂಹಲವಿದೆ.

ಜಾತಿ ಪದ್ದತಿ ಭಾರತೀಯರದ್ದೆ!?

ಇದುವರೆವಿಗೂ ಜಾತಿ ಪದ್ದತಿಯಿಂದ ಮತಾಂತರ ಎಂದು ಬೊಬ್ಬೆ ಹೊಡೆದವರು ಇದಕ್ಕೆ ಏನ್ ಹೇಳ್ತರೊ? ಕ್ರಿಶ್ಚಿಯನ್ ಆಗಿ ಮತಾಂತರವಾದರೂ ಅವರನ್ನು ಜಾತಿಭೂತ ಬಿಡಲಿಲ್ಲವಲ್ಲ?

http://neladamaatu.wordpress.com/

Saturday, January 22, 2011

ಮತಾಂತರ: ಸುಪ್ರೀಮ್ ನಿಲುವು

ಮತಾಂತರದ ವಿರುದ್ದ ಸುಪ್ರೀಮ್ ತನ್ನ ಅಸಮಾಧಾನವನ್ನು ಹೊರಗೆಡಹಿದೆ.

http://kannada.webdunia.com/newsworld/news/national/1101/22/1110122001_1.htm

ರಾಷ್ಟ್ರಧ್ವಜ ಹಾರ್ಸೋದ್ ತಪ್ಪ? ಅಂತ ಕೇಳ್ತಿದರೆ ರಾಕೇಶ್ ಶೆಟ್ಟಿ

ಸ್ನೇಹಿತ ರಾಕೇಶ್ ಶೆಟ್ಟಿ ಕೇಳ್ತಿದರೆ, ನಿಮ್ಮ ನಿಲುವು ದಾಖಲಿಸಿ. ಇಲ್ಲಿದೆ ಲೇಖನ.

Tuesday, December 28, 2010

ಎಲ್ಲಿಂದೆಲ್ಲಿಗೋ ತಲುಪಿದ ಪ್ರವಾಸ

ದೇವನೂರಿನ ಲಕ್ಷ್ಮಿ ರಮಣ


ಜೈಮಿನಿಭಾರತದ ಕರ್ತೃ ಲಕ್ಷ್ಮೀಶ ಕವಿಯ ಸ್ಫೂರ್ತಿಯ ದೇವಸ್ಥಾನ



ಅಯ್ಯನಕೆರೆ, ಸಖರಾಯಪಟ್ಟಣದ ಸಮೀಪ



ತೀರ್ಥಕರೆ ಜಲಪಾತ




ಬಸ್ರಿಕಟ್ಟೆ ಬಾಳೆಹೊಳೆ ಮಧ್ಯೆ ಸಿಗುವ ಸಣ್ಣ ಜಲಧಾರೆ



ಮೇರುತಿಯೆಡೆಗೆ ಹೋಗುವಾಗ



ಕಾಫಿಹಣ್ಣು



ಇಂತದ್ದೇ ಹೂಗಿಡಗಳು ಮೇರುತಿಯಲ್ಲಿ



ಮೇರುತಿಯ ತುತ್ತ ತುದಿಯಲ್ಲಿ ಅಮಿತ್



ಮೇರುತಿ ಹತ್ತಿ ಸುಸ್ತಾಗಿ ಮಲಗಿದ ಅಮಿತ್



ಹೊರನಾಡಿನಲ್ಲಿ ನೆಲದೊಳಗೆ ಅರ್ಧ ಹುದುಗಿ ಕುಳಿತ ಗುಬ್ಬಚ್ಚಿ



ಕೆಮ್ಮಣ್ಣುಗುಂಡಿ ಸಮೀಪದ ಅಬ್ಬೆ ಜಲಪಾತ

ಸಂಪದ › ಬ್ಲಾಗುಗಳು › prasca's blog › ಈ ಸ್ಥಳ ಗುರುತಿಸುವಿರಾ?




೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ ಬೆಂಗಳೂರಿನಿಂದ ಹೊರಟಾಗ ಬೇಗನೆ ಹೊರನಾಡನ್ನು ತಲುಪುವ ಬದಲು ಈ ಕೆರೆಯನ್ನು ಹುಡುಕಿ ಹೊರಟೆ. ಕೊನೆಗೂ ಸಿಕ್ಕ ಈ ಕೆರೆಯ ನೋಟ ರಮಣೀಯ. ಹೆಚ್ಚು ಪ್ರಸಿದ್ದವಲ್ಲ ಆದ್ದರಿಂದಲೇ ಬಹುಶಃ ಇನ್ನೂ ಈ ಪ್ರದೇಶ ನೈರ್ಮಲ್ಯದಿಂದಿದೆ.