Sunday, June 19, 2011

ಜನಸ್ತಾನದ ಬಳಿಯೇ ಇರುವ, ಆದರು ಹೆಚ್ಚು ಪ್ರಚಾರವಿಲ್ಲದ ಜಲಪಾತ

ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನನ್ನ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆಗೆಯಲು ಬಿಟ್ಟಿರಲಿಲ್ಲ. ಈ ಬಾರಿ ಅದೇನೇ ಆದರೂ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆ. ಸಮೀಪದ ದೇವಸ್ತಾನನಗರಿಗೆ ಶನಿವಾರ ಜನಸ್ತೋಮವೇ ನೆರೆಯುವುದರಿಂದ ವಸತಿ ಸಿಗುವುದು ಕಷ್ಟ. ಅಲ್ಲಿನ ಹತ್ತಿರದ ಊರಿನ ರವಿಕುಮಾರ್ ಅವರ ತಂಗಿಯ ಗಂಡ ಕೃಷ್ಣರಾಜ ನನ್ನ ಸಹೋದ್ಯೋಗಿ. ಅವನ ಮೂಲಕ ಹೋಂ ಸ್ಟೇ ಒಂದನ್ನು ಕಾದಿರಿಸಿದೆ. ಶನಿವಾರ ೧ ಗಂಟೆಗೆ ಮನೆಬಿಟ್ಟಾಗಲೇ ನಾನು ಹೊರಡುತ್ತಿದ್ದೇನೆಂದು ಅರಿವಾದದ್ದು. ೨ ಗಂಟೆಯಾದರೂ ಗೊರಗುಂಟೆ ಪಾಳ್ಯದಿಂದ ಹೊರಹೋಗಲು ಬೆಂಗಳೂರಿನ ವಾಹನದಟ್ಟಣೆಯಿಂದ ಸಾಧ್ಯವಾಗಲಿಲ್ಲ. ೭ ಗಂಟೆಗೆ ಗಮ್ಯ ತಲುಪಿದೆವು. ಬೆಳಿಗ್ಗೆ ೮ ಗಂಟೆಗೆ ಜಲಪಾತದೆಡೆ ಪಯಣ. ದೇವಸ್ತಾನ ನಗರಿಯಲ್ಲಿ ಯಾರಿಗೂ ಈ ಜಲಪಾತದ ಬಗ್ಗೆ ಅರಿವಿರಲಿಲ್ಲ. ಪತ್ರಿಕೆಯ ಮಾಹಿತಿಯನ್ನೆ ಆಧರಿಸಿ ಆ ಶಾಲೆಯ ಬಳಿ ಎಡಕ್ಕೆ ತಿರುಗಿದಾಗ ಕಂಡು ಬಂದ ಹಳ್ಳದ ಸೇತುವೆಯ ಬಳಿ ಕಂಡ ಜೀಪ್ ಚಾಲಕ ಇಲ್ಲಿ ಎಂತದೂ ಅರ್ಬಿ ಇಲ್ವಲ್ಲ ಎಂದಾಗ ನಿರಾಶೆ. ಮತ್ತೆ ಸಿಕ್ಕ ಇನ್ನಿಬ್ಬರು ಹೌದಲ್ಲ!! ಹೀಗೆ ಹೋಗಿ ಎಂದು ಮಾರ್ಗದರ್ಶನ ನೀಡಿದಾಗ ನೆಮ್ಮದಿ. ಆ ಮನೆ ತಲುಪಿ ಅವರ ಸಹಾಯದಿಂದ ತೋಟವನ್ನು ಹಾಯ್ದು ನಿಂತದ್ದು ಈ ಜಲಪಾತ ಬಳಿ. ಇಷ್ಟು ಸುಲಭದ ದಾರಿಯ ಕ್ರಮಿಸಿ ಇಂತಹ ಸುಂದರ ಜಲಪಾತ ತಲುಪಿದ್ದು ಖುಷಿಯಾಗಿದ್ದೇ ಎಲ್ಲರಿಗೂ ನಿರಿಗಿಳಿದೇ ಬಿಟ್ಟರು. ಆದರೂ ನಮ್ಮ ನಿರೀಕ್ಷೆಯಂತೆ ಮಳೆಯೂ ಇರಲಿಲ್ಲ, ಹೆಚ್ಚು ನಡಿಗೆಯಂತೂ ಇಲ್ಲವೇ ಇಲ್ಲ, ಆದರೂ ಸುಂದರ ತಾಣವೊಂದನ್ನು ಸಂದರ್ಶಿಸಿ ಬೆಂಗಳೂರು ತಲುಪಿದಾಗ ಸಂಜೆ ೫ ಗಂಟೆ.

ಅರವಿಂದರ ಬ್ಲಾಗ್ ನೋಡಿದಾಗ ಖಂಡಿಕಾ ಎಂದಿರುವುದು ಇದೇ ಜಲಪಾತವಿರಬೇಕೆಂದೆನೆಸಿತು. ಇರಬಹುದೇನೊ?
ತುಂಬಾ ದಿನಗಳ ನಂತರ ಚಿಕ್ಕದಾದರೂ ಚೊಕ್ಕದಾದ ಪ್ರವಾಸ ಮನಸ್ಸಿಗೆ ಮುದ ನೀಡಿತು.

Tuesday, June 7, 2011

ಕೇಂದ್ರ ಸರ್ಕಾರದ ನೀತಿಗಳು

ನಮ್ಮ ದೇಶದ ವಿರುದ್ದ ಹೋರಾಡುವ ಕಲ್ಲು ಹೊಡೆಸುವ ಗಿಲಾನಿ ದೆಹಲಿಗೆ ಬಂದರೆ ಕೆಂಪುಹಾಸಿನ ಸ್ವಾಗತ ಸಿಗುತ್ತೆ.
ಅಣ್ಣಾ ಹಜಾರೆ, ರಾಮ್ದೇವ್ ಬ್ರಷ್ಟಾಚಾರ ಕಪ್ಪುಹಣದ ವಿರುದ್ದ ಹೋರಾಡಿದ್ರೆ ಕತ್ತು ಹಿಡಿದು ಆಚೆ ನೂಕುತ್ತೆ.

ಕೇಂದ್ರ ಸರ್ಕಾರದ ಸ್ನೇಹಿತರು, ಎ.ರಾಜ, ಕನಿಮೋಳಿ, ಸುರೇಶ್ ಕಲ್ಮಾಡಿ, ದಯಾನಿಧಿ ಮಾರನ್, ಅಶೋಕ್ ಚವ್ಹಾಣ್, ಪಿ ಜೆ ಥಾಮಸ್.

ಶತ್ರುಗಳು ಅಣ್ಣಾಹಜಾರೆ, ರಾಮದೇವ್, ಅರವಿಂದ್ ಕೇಜ್ರಿವಾಲ, ಕಿರಣ್ ಬೇಡಿ, ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್.

ಒಂದು ಮಾತಿದೆ ಅವನು ಓದುವ ಪುಸ್ತಕ ತೋರಿಸು ಅವ್ನು ಎಂತವನು ಅಂತ ಹೇಳುತ್ತೇನೆ ಎಂದು. ಹಾಗೆಯೆ ನನಗನ್ನಿಸುತ್ತೆ ಅವನ ಮಿತ್ರರನ್ನು ತೋರಿಸು ಅವ್ನು ಎಂತಹವನು ಎಂದು ಹೇಳುತ್ತೇನೆಂದರೆ ಕಾಂಗ್ರೆಸ್ನ ಸ್ತಿತಿ ಏನಾಗ್ಬೇಕು?

ಇದೀಗ ತಾನೆ ದಿಗ್ವಿಜಯ್ ಸಿಂಗ್ ಎಂಬ ತಲೆತಿರುಕ ಒತ್ತಾಯಿಸುತ್ತಿದ್ದ, ರಾಜ್ಘಾಟ್ನಲ್ಲಿ ನೃತ್ಯ ಮಾಡಿದ್ದಕ್ಕೆ ಸುಷ್ಮಾ ಸ್ವರಾಜ್ ದೇಶದ ಕ್ಷಮೆ ಕೇಳ್ಬೇಕು ಅಂತ. ಎಂತ ವಿಪರ್ಯಾಸ ನೋಡಿ ರಾತ್ರೊ ರಾತ್ರಿ ಹೆಂಗಸರನ್ನು, ಮಕ್ಕಳನ್ನು ಲಾಠಿ ಏಟು ಕೊಟ್ಟ ನಿರ್ಮಾನುಷವಾಗಿ ಮಧ್ಯರಾತ್ರಿ ಪೆಂಡಾಲಿನಿಂದ ಹೊರಗಟ್ಟಿದ ಲಜ್ಜೆಗೆಟ್ಟವರು ಕ್ಷಮೆ ಕೇಳಬೇಕಿಲ್ಲ ಆದರೆ ಇವರು ಮಾಡಿದ್ದನ್ನ ಪ್ರಶ್ನಿಸಿದವರು ಕ್ಷಮೆ ಕೇಳ್ಬೇಕು. ಕಾಂಗ್ರೆಸ್ನ ನೀತಿಯೇ ಹೀಗಲ್ವ? ಅವರನ್ನು ಇಷ್ಟು ವರ್ಷಗಳ ಕಾಲ ಗೆಲ್ಸಿ ಅವರಿಂದ ಆಳಿಸಿಕೊಂಡಿದ್ದೇವಲ್ವ ನಮಗೆಲ್ಲ ಇದು ಸರಿಯಾದ ಶಿಕ್ಷೆಯೆ ಅಲ್ವೆ? we deserve it ಪಾಪ ಅವ್ರದ್ದೇನು ತಪ್ಪು.

Thursday, April 7, 2011

ನಿಲುನೆಯಲ್ಲೊಂದಿಷ್ಟು ಉತ್ತಮ ಚರ್ಚೆಗಳಿವೆ ನೋಡಿ

ನಿಲುಮೆ ಬ್ಲಾಗಿನಲ್ಲಿ ಕನ್ನಡದ ಬಗ್ಗೆ ಭರಪೂರ ಚರ್ಚೆಗಳಿವೆ ಆಸಕ್ತಿದಾಯಕವಾಗಿವೆ, ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ, ಗಮನಿಸಿ. ಕೆಲವು ಅನವಶ್ಯಕ ಪ್ರತಿಕ್ರಿಯೆಗಳಿವೆ (ನಾನೇ ಮೇಲು ಎನ್ನುವ ಅಹಂಕಾರದಿಂದ ಬಂದವು) ಅವನ್ನು ಒತ್ತಟ್ಟಿಗಿಟ್ಟರೆ ಒಳ್ಳೆಯ ಚರ್ಚೆ ನೋಡಲು ಸಿಗುತ್ತದೆ.

ಅಜಕ್ಕಳ ಗಿರೀಶ್ ಭಟ್ಟರ ಲೇಖನ

ಅದಕ್ಕೊಂದು ಪ್ರತಿಕ್ರಿಯಾತ್ಮಕ ಲೇಖನ

ಅಜಕ್ಕಳರ ಮತ್ತೊಂದು ಲೇಖನ ಮುಂದುವರೆದ ಭಾಗವೆ?

ಅದಕ್ಕೊಂದು ಮಾರುತ್ತರ (ಮಾಮೂಲಿನಂತೆ ಇಲ್ಲಿನ ಪ್ರತಿಕ್ರಿಯೆಗಳಲ್ಲಿ ಅಹಂ ನ ತಾಕಲಾಟವಿದೆ ಹೊರತು ಪಡಿಸಿದರೆ ಉತ್ತಮ ಚರ್ಚೆ)

ನಿಲುಮೆ ತಂಡಕ್ಕೊಂದು ಧನ್ಯವಾದ ಅಲ್ಲಲ್ಲ ನನ್ನಿ ;)

Tuesday, March 1, 2011

ವೇದಗಳೇಕೆ ಎಲ್ಲ ಜನಕ್ಕೆ ಸಿಗಲಿಲ್ಲ!

ಪ್ರೊ ಕೆ ಎಸ್ ನಾರಾಯಣಾಚಾರ್ಯರ ವೇದ ಸಂಸ್ಕೃತಿಯ ಪರಿಚಯ ಸಂಪುಟ-೨ ಓದುತ್ತಿದ್ದಾಗ ನನಗೆ ಹೊಳೆದದ್ದು. ವೇದಗಳನ್ನು ಮುಚ್ಚಿಟ್ಟರು, ಅದು ತಪ್ಪು. ಜ್ಞಾನ ಎಲ್ಲರಿಗೂ ಹಂಚಬೇಕಿತ್ತು ಎನ್ನುವುದು ಎಲ್ಲರೂ ಮಾಡುವ ವಾದ ಅಲ್ಲವೆ?

ಆದರೆ ಸರಿಯಾದ ಶಿಷ್ಯ ಸಿಗದ ಹೊರತು ವೇದಗಳನ್ನು ಕೊಡತಕ್ಕುದಲ್ಲ ಎನ್ನುತ್ತದೆ ಈ ಮಂತ್ರ

ಊಷರೇ ನಿವಪೇತ್ ಬೀಜಂ ಶಣ್ದೇ ಕನ್ಯಾಂ ಪ್ರಯೋಜಯೇತ್|
ಸೃಜೇದ್ವಾ ವಾನರೇ ಮಾಲಾಂ ನಾಪಾತ್ರೇ ಶಾಸ್ತ್ರಮುತ್ಸೃಜೇತ್|| (ಶಾಂಡಿಲ್ಯ ಸ್ಮೃತಿ Vi-258)

"ಬಂಜರು ಭೂಮಿಯಲ್ಲಿ ಬೇಕಾದರೂ ಬೀಜಗಳನ್ನು ಬಿತ್ತಬಹುದು, ಷಂಡನಿಗಾದರೂ ಕನ್ಯೆಯನ್ನು ಕೊಡಬಹುದು. ಮಂಗನ ಕೈಯಲ್ಲಿ ಮಾಲೆಯನ್ನಾದರೂ ಕೊಡಬಹುದು, ಆದರೆ ವಿದ್ಯೆಯನ್ನು ಎಂತಹ ಆಪತ್ಕಾಲದಲ್ಲಿಯೂ ಅಪಾತ್ರನಿಗೆ ಕೊಡತಕ್ಕದ್ದಲ್ಲ". ಗುರುವಿನ ಶರೀರದೊಡನೆಯೆ ಭಸ್ಮವಾಗಿ ಹೋದರೂ ಸರಿಯೆ.

ನಾಚೀಕೇತವಿದ್ಯೆಯನ್ನು ವಿವರಿಸುವಾಗ ಬಂದಿರುವ ಉಲ್ಲೇಖಗಳಿವು.

ವೇದಗಳ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿದುಕೊಳ್ಳುವ ಕುತೂಹಲವಿದೆ.

ಜಾತಿ ಪದ್ದತಿ ಭಾರತೀಯರದ್ದೆ!?

ಇದುವರೆವಿಗೂ ಜಾತಿ ಪದ್ದತಿಯಿಂದ ಮತಾಂತರ ಎಂದು ಬೊಬ್ಬೆ ಹೊಡೆದವರು ಇದಕ್ಕೆ ಏನ್ ಹೇಳ್ತರೊ? ಕ್ರಿಶ್ಚಿಯನ್ ಆಗಿ ಮತಾಂತರವಾದರೂ ಅವರನ್ನು ಜಾತಿಭೂತ ಬಿಡಲಿಲ್ಲವಲ್ಲ?

http://neladamaatu.wordpress.com/

Saturday, January 22, 2011

ಮತಾಂತರ: ಸುಪ್ರೀಮ್ ನಿಲುವು

ಮತಾಂತರದ ವಿರುದ್ದ ಸುಪ್ರೀಮ್ ತನ್ನ ಅಸಮಾಧಾನವನ್ನು ಹೊರಗೆಡಹಿದೆ.

http://kannada.webdunia.com/newsworld/news/national/1101/22/1110122001_1.htm

ರಾಷ್ಟ್ರಧ್ವಜ ಹಾರ್ಸೋದ್ ತಪ್ಪ? ಅಂತ ಕೇಳ್ತಿದರೆ ರಾಕೇಶ್ ಶೆಟ್ಟಿ

ಸ್ನೇಹಿತ ರಾಕೇಶ್ ಶೆಟ್ಟಿ ಕೇಳ್ತಿದರೆ, ನಿಮ್ಮ ನಿಲುವು ದಾಖಲಿಸಿ. ಇಲ್ಲಿದೆ ಲೇಖನ.