Saturday, October 23, 2010

ರಸ್ತೆಯಲ್ಲಿ ಸಿಕ್ಕ ಅಪರೂಪದ ಅತಿಥಿ





ಶರವೇಗದಲ್ಲಿ ಬರುತ್ತಿದ್ದ ವಾಹನಗಳಿಗೆ ಸಿಗದಂತೆ ದಾರಿಗಡ್ಡಲಾಗಿ ನಿಂತು ಅದರ ಗಮ್ಯವನ್ನು ತಲುಪಿಸಲಾಯ್ತು. ಮನುಷ್ಯ ಸ್ವಲ್ಪ ದಯೆ ತೋರಿದರೆ ನಾಗರೀಕ ಸಮಾಜಕ್ಕೆ ಬಲಿಯಾಗುವ ಇಂತಹ ಅದೆಷ್ಟೋ ಪ್ರಾಣಿಗಳ ಜೀವ ಉಳಿಸಬಹುದು.


http://www.youtube.com/watch?v=eP6Jc9RxTpc

Tuesday, October 12, 2010

ಕೊಡಗಿನ ಕಾಫಿ ತೋಟದ ಸುಂದರಿಯರು

ನಮ್ಮ ಪ್ರವಾಸದ ಕೊನೆಯ ತಾಣ, ನಾಗರಹೊಳೆಯಲ್ಲಿ ಹಿಂಡು ಹಿಂಡಾಗಿ ಕಾಣಸಿಗುವ ಚಿಗರೆಗಳು



ಬ್ರಹ್ಮಗಿರಿಯ ತಪ್ಪಲಿನಲ್ಲಿರುವ ಕೊಡಗಿನ ಸುಪ್ರಸಿದ್ದ ಇರ್ಪು ಜಲಪಾತ



ಪ್ರವಾಸದ ತಂಡ, ಚೇಲಾವರದ ಮುಂಭಾಗದಲ್ಲಿ




ಚೆಯ್ಯಾಂಡಣೆಯ ಬಳಿಯ ಚೇಲಾವರದ ಜಲಪಾತ




ಚೇಲಾವರ ಫಾಲ್ಸ್ ಉಂಟಾಗುವ ಸ್ಥಳದಲ್ಲಿ ಕಾಣುವ ನೋಟ


ಮಾದಂಡಬ್ಬಿ ಜಲಪಾತ


ಇಗ್ಗುತ್ತಪ್ಪ ದೇವಸ್ಥಾನದಿಂದ ಕಾಣುವ ಜಲಪಾತ. ಇದೂ ಕೂಡ ಮುಂಭಾಗದಿಂದ ಫೋಟೊ ತೆಗೆಯಲು ಕಾಡಿನಲ್ಲಿ ಇಲ್ಲದ ದಾರಿಯಲ್ಲಿ ಚಾರಣ ಕೈಗೊಳ್ಳ ಬೇಕು



ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ಬಳಿ ಕಂಡ ತಾವರೆ, ಇದು ಕಂಡದ್ದು ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದ ದಿನ. ಹಾಂ! ಕೊಡಗು ಪ್ರವಾಸದಲ್ಲಿ ಯಾವುದೇ ವಾರ್ತೆಗಳು ನಮ್ಮ ಕಿವಿಗೆ ಬೀಳಲಿಲ್ಲ ರಾಜಕೀಯ ನಾಟಕಗಳಂತೂ ದೂರವೇ ಉಳಿದಿತ್ತು.
ಅಬ್ಬಿ ಜಲಪಾತದ ಪೂರ್ಣ ದೃಶ್ಯ


ಮಾಂದಾಲಪಟ್ಟಿ, ಪುಷ್ಪಗಿರಿ ಶ್ರೇಣಿಯ ಬೆಟ್ಟದ ಶಿಖರ. ಸುಂದರ ಮನಮೋಹಕ ದೃಶ್ಯಗಳನ್ನೊಳಗೊಂದ ಬೆಟ್ಟ ಸಾಲು


ಕೊಡಗಿನ ಅತ್ಯಂತ ಪ್ರಸಿದ್ದ ಅಬ್ಬಿ ಜಲಪಾತ. ಮಡಿಕೇರಿಯ ಮೋರಿ ನೀರು ಇದರಲ್ಲಿ ಸೇರುತ್ತದೆ ಎಂಬುದು ಕೆಲವರ ಆರೋಪ.
ನಾಪಂಡಪೊಳೆ, ರಸ್ತೆ ಪಕ್ಕದಲ್ಲಿಯೆ ಸಿಗುವ ಜಲಪಾತ. ಹೆಚ್ಚು ಪ್ರಸಿದ್ದವಲ್ಲ ಕೊಡಗಿನ ಜಲಪಾತ. ಜಲಪಾತವೆನ್ನುವುದು ಸೂಕ್ತವಲ್ಲವೆನೋ? ಸ್ವಲ್ಪ ಕಡಿದಾದ ಇಳಿಜಾರಿನ ಜಾರಿ ಬರುವ ಹೊಳೆ ಕೊನೆಯಲ್ಲಿ ಚಿಕ್ಕದಾಗಿ ಧುಮುಕುತ್ತದೆ. ಆದರೂ ಒಮ್ಮೆ ನೋಡಬೇಕಾದ ಜಲಪಾತ!



ಅದೇ ಹೊಳೆ ಹರಿದು ಮತ್ತೊಂದು ಜಾಗದಲ್ಲಿ ಸಣ್ಣ ಬಂಡೆಯ ಮೇಲೆ ಹರಿವ ಪರಿ. ರಾತ್ರಿ ಡೇರೆ ಹಾಕಿ ತಂಗಲು ಪ್ರಶಸ್ಥವಾದ ಸ್ಥಳ ಎಂಬುದು ನನ್ನ ಅನಿಸಿಕೆ.


ಜಲಪಾತದ ಮೇಲ್ಭಾಗದಿಂದ ತೆಗೆದ ಫೋಟೊ.



ಕೋಟೆ ಬೆಟ್ಟದ ಸಮೀಪವಿರುವ ಹೆಸರು ಗೊತ್ತಿಲ್ಲದ ಜಲಪಾತ. ಮುಂಭಾಗದಿಂದ ಫೋಟೊ ತೆಗೆಯುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ನಡೆದು ಸೇರಿದ್ದು ಜಲಪಾತದ ಮೇಲ್ಭಾಗ. ಅಲ್ಲಿಂದ ಕೆಳಗಿಳಿದು ಛಾಯಾಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ.

ಎಲ್ಲ ಚಿತ್ರಗಳನ್ನು ನೋಡಲು ಇಲ್ಲಿ ಭೇಟಿ ಕೊಡಿ

Wednesday, July 28, 2010

ಹಿಂದೂ ಎನ್ನಲು ಹಿಂಜರಿಕೆಯೇಕೆ?

ನಿಮ್ಮ ಊಹೆ ಸರಿ ಹಿಂದೂಗಳ ಸಂಕೋಚ ಸ್ವಭಾವದ ಬಗ್ಗೆಯೆ ನಾನು ಕೇಳುತ್ತಿರುವುದು. ಅಲ್ಲ ಈ ಹಿಂದೂಗಳಿಗೇನಾಗಿದೆ? ತಾನು ಹಿಂದೂ ಹೆಮ್ಮೆಯಿಂದ ಹೇಳಿಕೊಳ್ಳುವುದಿರಲಿ, ಅದಕ್ಕೆ ನಾಚಿಕೆ ಪಟ್ಟುಕೊಳ್ಳುವುದೇಕೆ?
ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಹಿಂದೂಗಳನ್ನು ಗಮನಿಸಿ ಹಿಂದೂಗಳ ಪರವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನು ಜಾತ್ಯಾತೀತ (ಧರ್ಮಾತೀತ ಅಥವ ಸೆಕ್ಯುಲರ್) ಎಂದೇ ಬಿಂಬಿಸಿಕೊಳ್ಳಲು ಇಚ್ಚಿಸುತ್ತಾರೆ. ನಾವು ಬಲಪಂಥೀಯರಲ್ಲ ಎಡಪಂಥೀಯರೂ ಅಲ್ಲ ನಡುಪಂಥೀಯರೆಂದು ಇತ್ತೀಚೆಗೆ ಹೇಳಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಏಕೆ ಹೀಗೆ? ಹಿಂದೂ ಎನ್ನುವುದು ಅಸ್ಪೃಷ್ಯವೆ? ಹೀಗೆ ಹಿಂಜರಿಕೆ ಬೆಳೆಸಿಕೊಳ್ಳಲು ಹಿಂದೂಗಳು ಮಾಡಿರುವ ಅಂತಹ ಅಪರಾಧ ಯಾವುದು?
ಇರಬಹುದು ನಮ್ಮಲ್ಲೂ ಕೆಲವು ಕೆಟ್ಟ ಆಚರಣೆಗಳು ಬೆಳೆದು ಬಂದಿರಬಹುದು ಎಲ್ಲ ಧರ್ಮಗಳಲ್ಲೂ (ಧರ್ಮ ಮತ ಪಂಥ ಎಂಬ ವಿಭಿನ್ನ ಪದಗಳನ್ನು ಬಳಸಿಲ್ಲ, ಸಾಮಾನ್ಯ ಮನುಷ್ಯನಾಗಿ ಧರ್ಮವೆಂದು ಕರೆದಿದ್ದೇನೆ) ಇರುವ ಅಥ ಇರದ ಹುಳುಕುಗಳು ಹಿಂದೂ ಪದ್ದತಿಯಲ್ಲಿ ಬೆಳೆದು ಬಂದಿರಬಹುದು, ಅದೇ ಸಮಯಕ್ಕೆ ಅಂತಹ ಕೆಟ್ತ ಪದ್ದತಿಯನ್ನು ಮೈಕೊಡವಿಕೊಂಡು ಹಿಂದೆ ಬಿಡುವುದಕ್ಕೆ ಬದಲಾವಣೆಗೊಳ್ಳುವುದಕ್ಕೆ ತೆರೆದು ಕೊಂಡಿರುವ ಏಕೈಕ ಧರ್ಮ ಹಿಂದುತ್ವ. ಯಾರನ್ನೂ ನೋಯಿಸದ ದೇವಸ್ಥಾನಕ್ಕೆ ಬರಲೇ ಬೇಕು, ವಾರಕ್ಕೊಮ್ಮೆಯಾದರೂ ಪ್ರಾರ್ಥನೆ ಮಾಡಲೇ ಬೇಕು ಎನ್ನುವ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೊನೆಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ಒಪ್ಪಿಕೊಳ್ಳುವ ಏಕೈಕ ಧರ್ಮ ಆದರೂ ಈ ಹಿಂಜರಿಕೆ ಏಕೆ? ವಿಜ್ಞಾನವನ್ನು ಸತ್ಯವನ್ನು ಒಪ್ಪಿಕೊಳ್ಳುವ ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ ಎನ್ನುವ ಧ್ಯೇಯೋದ್ದೇಶ ಹೊಂದಿರುವುದು ತಪ್ಪೆ? ಎಲ್ಲರನ್ನೂ ತನ್ನಂತೆ ಕಾಣುವ ವಿಶಾಲ ಮನೋಭಾವದಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದು ಕೊಂಡಿದ್ದರೂ ನಮಗೇಕೆ ಇನ್ನೂ ಬುದ್ದಿ ಬಂದಿಲ್ಲ? ಭಾರತದಿಂದ ಹೊರದೂಡಲ್ಪಟ್ಟರೆ ಹಿಂದೂಗಳಿಗೆ ಆಶ್ರಯ ಎಲ್ಲಿ? ಆರೆಸ್ಸೆಸ್ ಎಂದಾಕ್ಷಣ ಹಾವು ಮೇಲೆ ಬಿದ್ದವರಂತೆ ಹೌಹಾರುವುದೇಕೆ? ಅವರು ಎಷ್ಟು ಜನರನ್ನು ಬಾಂಬಿಟ್ಟು ಉಡಾಯಿಸಿದ್ದಾರೆ? ಇತರರನ್ನು ನೋಡಿ ಕಲಿಯಬಾರದೇಕೆ? ಈಗಾಗಲೆ ಅಫ್ಗಾನಿಸ್ತಾನದಿಂದ ದೆಹಲಿಯವರೆಗೆ ನಮಗೆ ಹಿಂಜರಿತ ಉಂಟಾಗಿದೆ ಈಶಾನ್ಯ ರಾಜ್ಯಗಳು ಈಗಾಗಲೆ ಕ್ರಿಶ್ಚಿಯನ್ ಮಯವಾಗಿವೆ. ಕೇರಳ ಸಧ್ಯದಲ್ಲೆ ಮುಸ್ಲಿಂ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಉತ್ತರಪ್ರದೇಶದಲ್ಲಿ ೫೨% ಇರುವ ಮುಸ್ಲಿಮರು ಅಲ್ಪ ಸಂಖ್ಯಾತರಲ್ಲ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಬಿಹಾರದಲ್ಲಿ ಮುಸ್ಲಿಮನೊಬ್ಬನನ್ನು ಮುಖ್ಯಮಂತ್ರಿಯಾಗಲೂ ಸರ್ವ ಸರ್ಕಾರಗಳಲ್ಲೂ ಮಂತ್ರಿಗಿರಿ ಗಿಟ್ಟಿಸುವವನೊಬ್ಬ ಪ್ರಯತ್ನಿಸುತ್ತಾನೆ.

ಭಯೋತ್ಪಾದಕರನ್ನೆ ಸಮರ್ಥಿಸುವ ಝಾಕಿರ್ ನಮಗೆ ಮಾದರಿಯಾಗದಿದ್ದರೂ ಆಸ್ಟ್ರೇಲಿಯಾದ ಪ್ರಧಾನಿ ನಮ್ಮದು ಕ್ರಿಶ್ಚಿಯನ್ ದೇಶ ಇಲ್ಲಿ ನಮ್ಮಂತೆ ನಡೆಯುವುದಿದ್ದರೆ ಬನ್ನಿ ಎನ್ನುವ ಅವರ ಮಾತುಗಳು ನಮಗೆ ಮಾದರಿಯಾಗಬೇಕಲ್ಲವೆ?

Tuesday, June 29, 2010

ಹೊರನಾಡಿನ ಸುತ್ತ ಮುತ್ತ

ಹೊರನಾಡಿನ ಸುತ್ತಮುತ್ತ ಸಾಕಷ್ಟು ಆಕರ್ಷಕ ಪ್ರದೇಶಗಳಿವೆಯೆಂದು ತಿಳಿದಾಗಲಿಂದ ಹೋಗಲೇ ಬೇಕೆನ್ನುವ ನನ್ನ ತವಕ ತೀರಿದ್ದು ಮೇ ೯-೧೧ ರವರೆಗೆ ಅಲ್ಲೆಲ್ಲ ಓಡಾಡಿ ಬಂದಾಗ. ಊಟ ಮತ್ತು ವಸತಿ ಸೌಕರ್ಯ ಒದಗಿಸಿಕೊಟ್ಟು ನನ್ನ ಕೊರೆತವನ್ನೂ ಸಹಿಸಿಕೊಂಡ ಶ್ರೀ ರಾಘವೇಂದ್ರ ನಾವಡರು ಮತ್ತು ಶ್ರೀಮತಿ ಮಂಜುಳ ನಾವಡ ಅವರಿಗೆ ಧನ್ಯವಾದಗಳು.





ನನ್ನ ಹುಚ್ಚಿಗೆ ಬಲಿಯಾದವರು





ದುರ್ಗದ ದಾರಿಯಲ್ಲಿ




ದುರ್ಗದ ಕಡೆಗೆ ನಡಿಗೆ





ದುರ್ಗದಿಂದ ಮನಮೋಹಕ ದೃಶ್ಯ




ಇಂತಹ ಹೂಗಳು ನಾಡಿನಲ್ಲೇಕೆ ಕಾಣುವುದಿಲ್ಲ???




ಕಟ್ಟಿ ತಂದ ಬುತ್ತಿಯ ವನಭೋಜನ





ದೂರದಲ್ಲಿ ಕಾಣುವ ದುರ್ಗ, ನಮ್ಮ ಗುರಿ



ದುರ್ಗದಹಳ್ಳಿಯಿಂದ ಹಿಂತಿರುಗುವಾಗ ಸಿಗುವ ದೇವಳದ ಬಳಿ ಕಂಡ ಪುರಾತನ ಸಂಪಿಗೆ ಮರ



ಬಲ್ಲಾಳರಾಯನ ದುರ್ಗದ ದಾರಿಯಲ್ಲಿ ಬಂಗಾಡಿ ಮತ್ತು ಕಿಲ್ಲೂರು ಇಲ್ಲಿಂದ ವೀಕ್ಷಣೆಗೆ ಲಭ್ಯ




ಒಂದು ತುದಿಯಿಂದ ಮತ್ತೊಂದು ತುದಿಗೆ ಹೋದಾಗ ನಮ್ಮ ಜೀಪ್ ಕಂಡಿದ್ದು ಹೀಗೆ ಹಸಿರಿನ ಮಧ್ಯೆ ಕರಗಿ ಹೋದ ಜೀಪ್





ಕ್ಯಾತನಮಕ್ಕಿಯಿಂದ ಒಂದು ಹಸಿರು ನೋಟ





ಕಾಡಿನ ನಡುವೆ ನಾವೂ ಪ್ರಾಣಿಗಳಲ್ವೆ? ಅದಕ್ಕೆ ಹೀಗೆ




ವನಸುಮ




ಕ್ಯಾತನಮಕ್ಕಿಯಿಂದ ಕೆಳಗಿಳಿದು ನಡೆದಾಗ ಸಿಕ್ಕ ಸಣ್ಣ ಝರಿ




ಕಳಸದ ಸಮೀಪ ನಮ್ಮ ಜೀಪ್ ಚಾಲಕ ಮತ್ತು ಮಾರ್ಗ ದರ್ಶಕ ’ದೊರೆ’ ತೋರಿಸಿದ ಜಲಪಾತ ಹೆಸರಿಲ್ಲ (ಅವನಿಗೂ ಹತ್ತಿರದ ಮನೆಯವರಿಗೂ ಗೊತ್ತಿಲ್ಲ)




ಹೊರ ನಾಡಿನ ಸಮೀಪದ ಭದ್ರೆಯ ತೂಗು ಸೇತುವೆ ಬಳಿ,
ಇಲ್ಲಿ ನೀರಿನಲ್ಲಿ ಹಾವು ಕಂಡ ಅಮಿತ್ ಮತ್ತು ರಿಷಿ ಓಡಿದ್ದು ನೆನಪಿಸಿಕೊಂಡ್ರೆ ಈಗ್ಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ




ಅಂಬಾತೀರ್ಥ ಬಳಿ ಕಾಣುವ ನಿಸರ್ಗ ಕೊರೆದ ಕಲೆ


ಅಂಬಾತೀರ್ಥದ ಭದ್ರೆ


ಅಂಬಾತೀರ್ಥದಲ್ಲಿನ ಬಂಡೆಗಳಲ್ಲಿ ಮೂಡಿದ ಮನಮೋಹಕ ಕಲೆ, ಹೊರನಾಡಿನ ಸಮೀಪ


ಶೃಂಗೇರಿಯ ಸಮೀಪದ ಮಗೇಬೈಲು ಜಲಪಾತದ ಬಳಿ ಅಮಿತ್ ಮತ್ತು ರಿಷಿ



ಹೊರನಾಡಿನ ಸಮೀಪ ಕ್ಯಾತನಮಕ್ಕಿ


Friday, April 16, 2010

ಬೆಂಗಳೂರಿನ ಹುಡುಗಿಯರ ಬಗ್ಗೆ ...............


ಮೊನ್ನೆ ಅಂಬೇಡ್ಕರ್ ಜಯಂತಿಯಂದು ಕುಣಿಗಲ್ ಸಮೀಪದ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿನಲ್ಲಿ ಕುಣಿದಾಡಿ ಹಿಂತಿರುಗಿ ಬರುವಾಗ ಕಂಡ ಲಾರಿಯೊಂದರ ಹಿಂಬದಿ ಬರಹ. ಚಿತ್ರ ತೆಗೆಯಲು ಸ್ಫೂರ್ತಿ ಸೋಮಾರಿ ಕಟ್ಟೆ ಶಂಕರಪ್ರಸಾದ.

Thursday, March 25, 2010

ನರಹತ್ಯೆಯ ಅಜೆಂಡಾ ಹೀಗೊಂದು ವಿಡಂಬನೆ

ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತಿಲ್ಲ.

ಗೋಹತ್ಯೆಯನ್ನು ಮಾಡೀಯೆ ತೀರಬೇಕೆಂದು ಇವರೇಕೆ ಇಷ್ಟು ಮುತುವರ್ಜಿ ವಹಿಸುತ್ತಿದ್ದಾರೆ? ಇನ್ನು ಕೆಲವು ಪುಣ್ಯಾತ್ಮರು ವಯಸ್ಸಾದ ದನಗಳನ್ನು ಮನೆಯಲ್ಲಿಟ್ಟುಕೊಳ್ಳಬೇಕೆ ಎಂದು ಕೇಳಿದ್ದಾರೆ. ದನಗಳನ್ನು ಮನೆಯಲ್ಲಿಟ್ಟುಕೊಂಡರೆ ಆಗುವ ನಷ್ಟವನ್ನು ಪೈಸೆಗಳ ಲೆಕ್ಕದಲ್ಲಿ ಕೊಡುತ್ತಾರೆ.

ನಾವಂತೂ ಬಾಲ್ಯದಲ್ಲಿ ಹಸು ಎಮ್ಮೆ ಕರುಗಳನ್ನು ಹಾಸಿಗೆಯಲ್ಲಿ ಮಲಗಿಸಿಕೊಂಡೆ ಮಲಗಿದ್ದೆವು. ಎಂದಿಗೂ ಮನೆಯ ದನಗಳನ್ನು ಕಟುಕರಿಗೆ ಮಾರಿದ್ದಿಲ್ಲ. ವಯಸ್ಸಾದರೆ ಮಾರಬೇಕನ್ನುವ ಇವರ ಬಾಯಿ ಚಪಲ ಆಗ ನಮ್ಮಲ್ಯಾರಿಗೂ ಇರಲೇ ಇಲ್ಲ. ಮಾರುತ್ತೇನೆಂದರೂ ಮನೆಯ ಹಿರಿಯರು ಬೈಯುತ್ತಿದ್ದದ್ದು ಹೀಗೆ, "ಒಂದು ಹೊರೆ ಹುಲ್ಲು ಒಂದು ತಂಬಿಗೆ ನೀರು" ಅದಕ್ಕಿನ್ನೇನು ಬೇಕು ಅದನ್ಯಾಕೆ ಮಾರ್ತೀಯ ನಮ್ಮನೆಲೆ ಸಾಯ್ಲಿ ಬಿಡು. ಸತ್ರೆ ತೋಟಕ್ಕೆ ಗೊಬ್ಬರ ಆಗುತ್ತೆ ಇಲ್ಲಾಂದ್ರೆ ನಾಯಿ ನರಿಗಳಿಗೆ ಆಹಾರ ಎಂದು ಈಗಲೂ ನನ್ನೂರಿನಲ್ಲಿ ಹೇಳುತ್ತಾರೆ.

ನನ್ನೂರಿನಲ್ಲಿ ಇಂದಿಗೂ ನಡೆಯುವ ದನದ ಜಾತ್ರೆಗೆ ಕಟುಕರನ್ನು ಬರಲು ಬಿಡುವುದಿಲ್ಲ. ಬಂದರೂ ಎಷ್ಟೆ ಹಣ ಕೊಡುತ್ತೇನೆಂದರೂ ರೈತ ಅವನ್ನು ಕೊಡುವುದಿಲ್ಲ. ವಯಸ್ಸಾದ ರಾಸುಗಳನ್ನು ಮಾರುವುದಕ್ಕೆ ತರುವುದೇ ಇಲ್ಲ. ಕಟುಕರಿಗೆ ಮಾರಬಾರದೆಂದು ಕೆಲವರು ಕರಪತ್ರದ ಮೂಲಕ ಮತ್ತು ಬೀದಿ ನಾಟಕಗಳ ಮೂಲಕ ಜಾಗೃತಿ ಉಂಟು ಮಾಡುತ್ತಾರೆ.

ಕಳೆದ ೧೦ ವರ್ಷಗಳವರೆಗೂ ರಾಸುಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಉತ್ತರ ಕರ್ನಾಟಕದವರೆಗೂ ನೂರಾರು ಕಿಮೀಗಳನ್ನು ನಡೆಸಿಕೊಂಡೆ ಹೋಗುವವರನ್ನು ಕಣ್ಣಾರೆ ಕಂಡಿದ್ದೇನೆ.

ಗೋಹತ್ಯೆಯ ನಿಷೇಧ ಹಿಂದೂಗಳ ಅಜೆಂಡ ಎಂದೆ ಇವರುಗಳು ಇಷ್ಟು ಶತಾಯಗತಾಯ ವಿರೋಧಿಸುವುದು. ನೀವು ಗಮನಿಸಿರಬಹುದು, ಎಲ್ಲದಕ್ಕೂ ರೈತನನ್ನು ಇಲ್ಲವಾದರೆ ದಲಿತನನ್ನು ಎಳೆದು ತರಲಾಗುತ್ತದೆ. ಇಲ್ಲಿ ನಿಜವಾದ ರೈತ ಮತ್ತು ದಲಿತ ತಮ್ಮ ಪಾಡಿಗೆ ತಾವಿದ್ದಾರೆ. ಅವೆರಡು ಈಗ ಸಧ್ಯ ಇರುವ ಸರ್ಕಾರವನ್ನು ಸುಲಭವಾಗಿ ಹೆದರಿಸಲು ಬಳಸುತ್ತಿರುವ ಬೆದರು ಬೊಂಬೆಗಳು. ಗಾಂಧಿಯನ್ನು ಎಲ್ಲದಕ್ಕೂ ಎಳೆದು ತರುವ ಇವರು ಅವಕಾಶ ರಾಜಕಾರಣ ಅನುಕೂಲ ಸಿಂಧು ತಂತ್ರಕ್ಕೆ ಹೆಸರಾದವರುಗಳು. ಗಾಂಧಿ ಬೇಕಾದಾಗ ಗಾಂಧಿ ರೈತ ಬೇಕಾದ ಕಡೆ ರೈತ ಇಲ್ಲ ದಲಿತ. ನಿಜವಾದ ರೈತ ಲಾಭ ನಷ್ಟಕ್ಕಿಂತ ಅವನ ಕಾರ್ಯದಲ್ಲಿ ನಿರತನಾಗಿದ್ದಾನೆ. ಯಾವುದೇ ನಿಜವಾದ ರೈತ ಖಂಡಿತ ತನಗೆ ಅನ್ನ ಕೊಟ್ಟ ರಾಸುಗಳನ್ನು ಕಟುಕರಿಗೆ ಮಾರುವುದಿಲ್ಲ. ಈಗ ಆತನ ತಲೆಗೆ ಇದನ್ನು ತುಂಬಿ ಅವನನ್ನು ಬೀದಿಗೆ ಎಳೆದು ತರಬೇಕಷ್ಟೆ. ವಯಸ್ಸಾದ ಹಸುಗಳಿಗೆ ಒಂದು ಹೊರೆ ಹುಲ್ಲು ಒಂದು ಬಾನಿ ನೀರು ಖಂಡಿತ ರೈತನಿಗೆ ಹೆಚ್ಚಲ್ಲ ಏಕೆಂದರೆ ಆ ರಾಸುಗಳಿಂದ ಅವನು ಅದಕ್ಕಿಂತ ಹೆಚ್ಚಿನದನ್ನು ಪಡೆದಿರುತ್ತಾನೆ. ಅವುಗಳಿಂದಲೆ ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಆದರೆ ಇವರ ಬಾಯಿ ಚಪಲಕ್ಕೆ ರೈತನ ಮೇಲೆ ಕರುಣೆ ಉಕ್ಕಿ ಬಂದಂತೆ ನಾಟಕವಾಡುತ್ತಿದ್ದಾರೆ. ಇವರ ಅಜೆಂಡ ಆ ಕಸಾಯಿಖಾನೆಗಳನ್ನು ನಂಬಿದವರ ಬದುಕು ಮತ್ತು ಅವರಗಳ "ಮತ" ಪಡೆಯುವ ದುರುದ್ದೇಶ.

ನನಗೀಗ ಅನಿಸುತ್ತಿರುವುದು, ಗೋಹತ್ಯೆಯ ನಿಷೇದದ ಕಾನೂನು ವಿರೋಧಿಸಿದಂತೆ ನರಹತ್ಯೆ ಕಾನೂನನ್ನು ವಿರೋಧಿಸ ಬೇಕಲ್ಲವೆ? ಏಕೆಂದರೆ ವಯಸ್ಸಾದ ವ್ಯಕ್ತಿಗಳಿಂದಲೂ ಯಾವುದೇ ಉಪಯೋಗವಿರುವುದಿಲ್ಲ. ಬೆಂಗಳೂರಿನಲ್ಲಾದರೆ ಅವರಿಗೆ ವೃದ್ದಾಶ್ರಮವಿದೆ ಹಳ್ಳಿಗಳಲ್ಲಿ ಅವುಗಳಿಲ್ಲವಾದ್ದರಿಂದ ನರಹತ್ಯೆ ನಿಷೇಧವನ್ನು ಹಿಂತೆಗೆದು ಕೊಂಡರೆ ವಯಸ್ಸಾದವರೆಲ್ಲರನ್ನೂ ಸಾಯಿಸಿ ಬಿಟ್ಟರೆ ದೇಶದ ಆರ್ಥಿಕತೆಗೆ ಇಂಬು ಸಿಗುವುದಲ್ಲದೆ ಇವರಿಗೆ ಖರ್ಚು ಮಾಡುವ ಆಹಾರ ನೀರು ಎಲ್ಲವನ್ನೂ ಮಾರಿಕೊಳ್ಳುವುದರಿಂದ ವೈಯಕ್ತಿವಾಗಿ ಅಲ್ಲದೆ ದೇಶಕ್ಕೂ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇನ್ನೂ ಒಂದು ಲಾಭವೂ ಇದೆ, ಭಾರತದಲ್ಲಿ ಇಂತಹ ಒಂದು ಕಾನೂನು ಬಂದರೆ ಭಯೋತ್ಪಾದನೆಯೂ ಕಡಿಮೆಯಾಗುತ್ತದೆ ಮನುಷ್ಯ ಜೀವಕ್ಕೆ ಬೆಲೆ ಇಲ್ಲದ ಮೇಲೆ ಕೊಲ್ಲುವವರು ಕಡಿಮೆಯಾಗುತ್ತಾರೆ.

ಬಾಳ ಸಂಜೆಯಲ್ಲಿರುವವರಿಗೂ ಮಾಡುವ ಖರ್ಚನ್ನೂ ಹೀಗೆಯೆ ಲೆಕ್ಕ ಹಾಕಿ ನೋಡಿದರೆ ಮುಂದೆ ಅದೂ ಬರಬಹುದು ನೀವೆನಂತೀರಾ?

Tuesday, March 23, 2010

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ!

ಪ್ರತಿದಿನ ಮಧ್ಯಾಹ್ನ ಊಟಕ್ಕೆ ಬಂದಾಗ ನನಗೆ ಊಟ ಬಡಿಸುವ ಮಧ್ಯೆ ಅಮ್ಮ ಆಗಾಗ ಬಾಗಿಲಿನ ಬಳಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ್ದೆ, ಏಕೆಂದೆ ಕಂಡು ಹಿಡಿಯಲಾಗಿರಲಿಲ್ಲ.

ಅದೊಂದು ದಿನ ಅಮ್ಮ ಹೊರಗೆ ಹೋಗ್ಬೇಕಿದೆ ನಾನು ಅಡುಗೆ ಮಾಡಿಟ್ಟಿರ್ತಿನಿ ಬಡಿಸ್ಕೊಂಡು ಊಟ ಮಾಡಿ ಹೋಗು ಎಂದು ಬೆಳಿಗ್ಗೆಯೆ ಹೇಳಿದ್ದರು.

ಸರಿ ೧೨ ಗಂಟೆಗೆ ಬಂದವನೆ ಊಟ ಮಾಡಲು ಕುಳಿತವನಿಗೊಂದು ಬಾಗಿಲಲ್ಲಿ ಬೀಡಾಡಿ ಹಸುವೊಂದು ಬಂದು ನಿಂತು ಅಂಬಾ ಎಂದು ಕರೆಯಲು ಆರಂಭಿಸಿತು. ಒಂದು ಬಕೆಟ್ ನೀರು ತೆಗೆದು ಕೊಂಡು ಹೋಗಿಟ್ಟೆ ಊಹೂಂ ಮೂಸಿ ನೋಡಲಿಲ್ಲ. ಸರಿ ಹೋಗುತ್ತೆ ಬಿಡು ಎಂದು ಕೊಂಡವನೆ ಊಟ ಮುಗಿಸಿದೆ. ಆಗ ಬಂತು ಅಮ್ಮನ ಕರೆ ಬಾಗಿಲಿಗೆ ಒಂದು ಹಸು ಬಂದು ಅಮ್ಮಾ ಅಂತ ಕರೆಯುತ್ತೆ ಕಣೊ ಅಲ್ಲಿ ಬುಟ್ಟಿಯಲ್ಲಿ ಒಂದೆರಡು ಬಾಳೆಹಣ್ಣಿರುತ್ತೆ ಕೊಟ್ಬಿಡು ಎಂದರು. ಆಗ ಗೊತ್ತಾಯ್ತು ಅಮ್ಮನ ಚಡಪಡಿಕೆಗೆ ಕಾರಣ.

ಇಷ್ಟೆಲ್ಲಾ ನೆನಪಾದದ್ದು, ಈಗ ೪.೩೦ ರ ಸಮಯದಲ್ಲಿ ರಬ್ಬರ್ ಅಂಟಿಹಾಕಿ ಟೈಲ್ಸ್ ನೆಲದ ಮೇಲೆ ಜಾರದಂತೆ ಮಾಡಿ ಬೀಸುವಕಲ್ಲಿನಿಂದ ಬೀಸುತ್ತಿದ್ದ ನಮ್ಮಮ್ಮ, ಅಮ್ಮಾ ಎನ್ನುವ ಆ ಕರೆಗೆ ಬೀಸುವಕಲ್ಲನ್ನು ಬಿಟ್ಟು ಬಾಳೆಹಣ್ಣು ತೆಗೆದು ಕೊಂಡು ಹೋದಾಗ ಎನಿಸಿದ್ದು

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ?